ಕೆರೆ ಏರಿ ಮೇಲೆ ಧ್ವಜಾರೋಹಣ

  • In State
  • August 17, 2020
  • 37 Views
ಕೆರೆ ಏರಿ ಮೇಲೆ ಧ್ವಜಾರೋಹಣ

ಕೊಟ್ಟೂರು :ತಾಲೂಕಿನ ಉಜ್ಜಯಿನಿ ಗ್ರಾಮದ ಗ್ರಾಮಸ್ವರಾಜ್ ಪ್ರತಿಷ್ಠಾನ ಹಾಗೂ ಗ್ರಾಮಸ್ಥರು ಉಜ್ಜಯಿನಿಯಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿನೂತನವಾಗಿ ಆಚರಿಸಿದರು.
ಧ್ವಜಾರೋಹಣ ಮಾಡಿ ಮಾತನಾಡಿದ ರೇವಯ್ಯ ಒಡೆಯರ್, ಭಾರತ ಸ್ವಾತಂತ್ರ‍್ಯ ಗಳಿಸಿಯಾಗಿದೆ. ಇದನ್ನು ಉಳಿಸಿಕೊಳ್ಳುವುದರ ಜೊತೆಗೆ ಶಿಕ್ಷಣ, ಆರ್ಥಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಕಡೆಗೆ ಹೆಚ್ಚಿನ ಗಮನ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಕಾರ್ಯಗಳು, ಶಿಕ್ಷಣ ಬೆಳವಣಿಗೆ ಹಾಗೂ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದಾಗಬೇಕು. ಜೊತೆಗೆ ಗ್ರಾಮದ ಶಿಕ್ಷಣ ಶಾಲಾ ಕಾಲೇಜನ್ನು ಉನ್ನತೀಕರಿಸಿ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಶೈಕ್ಷಣಿಕ ತರಗತಿಗಳಲ್ಲಿ ಉತ್ತಮ ಸಾಧನೆ ಮಾಡಲು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಯಮ್ಮ ಮಾತನಾಡಿ, ಗ್ರಾಮಸ್ವರಾಜ್ ಪ್ರತಿಷ್ಠಾನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಕೆಲಸಗಳಿಗೆ ನಮ್ಮ ಪಂಚಾಯತಿಯ ಬೆಂಬಲವಿದೆ ಎಂದು ನುಡಿದರು.
ಗ್ರಾಹಕರ ನ್ಯಾಯಾಲಯದ ಸದಸ್ಯೆ ಶಾಂತ ಮಾತನಾಡಿ, ನಿಮಗೆ ಬೇಕಾದ ಕಾನೂನು ಹಾಗೂ ಗ್ರಾಹಕರ ಸಮಸ್ಯೆ ಪರಿಹರಿಸಲು ಸಿದ್ದಳಿದ್ದೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos