ಬೇಡಿಕೆ ಈಡೇರಿಕೆಗೆ ಅಗ್ರಹ

ಬೇಡಿಕೆ ಈಡೇರಿಕೆಗೆ ಅಗ್ರಹ

ಹೊಸಕೋಟೆ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಛಾಯಾಗ್ರಾಹಕರ ಬೇಡಿಕೆಗಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹೊಸಕೋಟೆ ತಹಸೀಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಲಾಯಿತು.
ತಾಲ್ಲೂಕು ಛಾಯಾಗ್ರಾಹಕ ಸಂಘದ ಅಧ್ಯಕ್ಷ ಹೆಚ್.ಕೆ ಅಮರನಾಥ್ ಕೊರೋನಾ ಸೋಂಕನ್ನು ತಡೆಗಟ್ಟಲು ಸರ್ಕಾರ ಜಾರಿ ಮಾಡಿದ ಲಾಕ್ ಡೌನ್ ನಿಂದಾಗಿ ಮಾರ್ಚನಿಂದ ಮದುವೆಗಳು ಮತ್ತು ಸಮಾರಂಭಗಳು ನಿಷೇಧದ ಹಿನ್ನೆಲೆ ವೃತ್ತಿ ನಿರತ ಛಾಯಾಗ್ರಾಹಕರು. ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಸರ್ಕಾರ ಇತರೆ ಅಸಂಘಟಿತ ಕಾರ್ಮಿಕರಿಗೆ ಮಂಜೂರು ಮಾಡಿರುವ ಸೌಲಭ್ಯ ನಮ್ಮ ಛಾಯಾಗ್ರಾಹಕರಿಗೂ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇಲ್ಲಿಯವೆಗೂ ಯಾವುದೇ ಪ್ರಯೋಜನವಾಗಿಲ್ಲ. ಬಹಳಷ್ಟು ಛಾಯಾಗ್ರಾಹಕರು ಬಾಡಿಗೆ ಮನೆ, ಮತ್ತು ಬಾಡಿಗೆ ಸ್ಟುಡಿಯೋಗಳನ್ನು ಇಟ್ಟುಕೊಂಡು ಕುಟುಂಬ ನಿರ್ವಹಣೆ ಜೊತೆಗೆ ಮಕ್ಕಳನ್ನು ಶಲಾ ಶುಲ್ಕ ಪಾವತಿಸಲು ಸಹ ಕಷ್ಟವಾಗಿದೆ. ಪರಿಸ್ಥಿತಿ ನಿರ್ಮಾಣವಾಗಿದ್ದು ಆಕ್ಟೋಬರ್ ೩೧ ರಂದು ರಾಜ್ಯಾದ್ಯಂತ ಛಯಾಗ್ರಾಹಕರು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸರ್ಕಾರದ ಯೋಜನೆ ಛಾಯಾಗ್ರಾಹಕರಿಗೂ ವಿಸ್ತರಣೆ ಮಾಡಬೇಕು.
ಕಾರ್ಯ ನಿತರ ವೃತ್ತಿ ಛಾಯಾಗ್ರಾಹಕರಿಗೆ ಪಿಂಚಣಿ ಯೋಜನೆ ಜಾರಿಗೂಳಿಸಬೇಕು ಕುಟುಂಬದ ಸದಸ್ಯರಿಗೆ ಆರೋಗ್ಯ ರಕ್ಷಣೆ, ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡಬೇಕು ಎಂದು ಹೇಳಿದರು. ಗೌರವ ಅಧ್ಯಕ್ಷ ಎಂ.ಸಿ ಮುನಿರಾಜು, ಕಾರ್ಯದರ್ಶಿ ಮಲ್ಲೇಶ್, ಕಜಾಂಚಿ ಶಿವಸ್ವರೂಪ್, ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು

ಫ್ರೆಶ್ ನ್ಯೂಸ್

Latest Posts

Featured Videos