ಜಿಂಕೆ ಸ್ಥಳದಲ್ಲೇ ಸಾವು

ಜಿಂಕೆ ಸ್ಥಳದಲ್ಲೇ ಸಾವು

ನೆಲಮಂಗಲ, ಜ. 14 : ಬೈಕ್ ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ,ಜಿಂಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪ್ಪಗೊಂಡನಹಳ್ಳಿ ನಿವಾಸಿ ಹರೀಶ್(21) ಮೃತಪಟ್ಟ ಬೈಕ್ ಸವಾರ. ಇಂದು ಬೆಳಗ್ಗೆ 7 ಗಂಟೆಗೆ ಈತ ತನ್ನ ಸಹೋದರಿಯನ್ನು ಹೋಬಳಾಪುರದ ಬಸ್ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಹಿಂತಿರುಗುತ್ತಿದ್ದಾಗ ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯಾದ ರಭಸಕ್ಕೆ 7 ವರ್ಷದ ಜಿಂಕೆ ಮತ್ತು ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಫ್ರೆಶ್ ನ್ಯೂಸ್

Latest Posts

Featured Videos