ಉಚ್ಚಾಟನೆ-ಹಲ್ಲೆ ಖಂಡಿಸಿ ಸೋಮವಾರ ಪ್ರತಿಭಟನೆಗೆ ನಿರ್ಧಾರ

ಉಚ್ಚಾಟನೆ-ಹಲ್ಲೆ ಖಂಡಿಸಿ ಸೋಮವಾರ ಪ್ರತಿಭಟನೆಗೆ ನಿರ್ಧಾರ

ಬೇಲೂರು, ನ. 19: ಬೇಲೂರು ಬಹುಜನ ಸಮಾಜ ಪಾರ್ಟಿಯಿಂದ ಎನ್.ಯೋಗೇಶ್ ಅವರನ್ನು  ಉಚ್ಚಾಟಿಸಲ್ಪಟ್ಟ ಬಿಎಸ್‍ಪಿ ರಾಜ್ಯ ಪ್ರಮುಕರ ಕ್ರಮವನ್ನು ಖಂಡಿಸಿ ನೆನ್ನೆ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶದಿಂದ ಎನ್.ಯೋಗೇಶ್ ಪರ ಕಾರ್ಯಕರ್ತರನ್ನು ಥಳಿಸಲಾಗಿದೆ ಎಂದು ಬಿಎಸ್‍ಪಿ ಪ್ರಮುಖರು ಆರೋಪಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರಿಗೆ ಹೇಳಿಕೆ ನೀಡಿದ ಥಳಿತಕ್ಕೆ ಒಳಗಾದ ಶಶಿಧರಮೌರ್ಯ, ವಡ್ಡರಹಳ್ಳಿ ಇಂದ್ರೇಶ್, ವಿರೂಪಾಕ್ಷ ಇವರುಗಳು, ಕಳೆದ 20 ವರ್ಷದಿಂದ ಬಿಎಸ್‍ಪಿ ಪರವಾಗಿ ನಿಷ್ಟೆಯಿಂದ ದುಡಿದ ಎನ್.ಯೋಗೇಶ್ ಅವರು ತಾಲೂಕಿನಿಂದ ರಾಜ್ಯಮಟ್ಟದವರಗೆ ಬಿಎಸ್‍ಪಿ ಯಲ್ಲಿ ವಿವಿಧ ಹುದ್ದೆಗಳ ಅಲಂಕರಿಸಿ ಪಕ್ಷ ಸಂಘಟನೆ ಮಾಡಿದ್ದಲ್ಲದೆ, ಹಲವು ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಲು ಕಾರಣರಾಗಿದ್ದಾರೆ.

ಇಂತಹ ನಿಷ್ಠಾವಂತ ಪ್ರಮುಖರನ್ನು ಪಕ್ಷದಿಂದ ಉಚ್ಚಾಟಿಸಿರುವುದು ಸರಿಯಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದೆವು. ಆದರೆ ಪ್ರವಾಸಿ ಮಂದಿರದಲ್ಲಿದ್ದ ನಮ್ಮೊಂದಿಗೆ ಗಲಾಟೆ ಮಾಡಿ ಪ್ರತಿಭಟನೆ ನಡೆಸದಂತೆ ತಾಕೀತು ಮಾಡಿದ ಗಂಗಾಧರಬಹುಜನ್ ಅವರು ಮಾತಿನ ನಡುವೆಯೆ ನಮ್ಮನ್ನು ಥಳಿಸಿದರು ಎಂದು ಆರೋಪಿಸಿದರು. ಇದರಿಂದ ನಮ್ಮ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಈ ಕಾರಣದಿಂದ ನಡೆಸಲ್ಪಡಬೇಕಿದ್ದ ಪ್ರತಿಭಟನೆಯನ್ನು ಕೈಬಿಟ್ಟು ನವೆಂಬರ್ 25 ರಂದು ಸೋಮವಾರ ನಡೆಸಲಾಗುವುದು ಎಂದು ತಿಳಿಸಿದರು.

ಥಳಿತಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡುವುದಿಲ್ಲ. ಪ್ರತಿಯಾಗಿ ಪ್ರತಿಭಟನೆ ಮೂಲಕ ಉತ್ತರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು. ತಿರುಮಲನಹಳ್ಳಿ ಶಿವಕುಮಾರ್, ಹಗರೆ ವಿರುಪಾಕ್ಷ, ಪ್ರಸಾದ್ ಇತರರು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos