ಬೆಳೆ ರಕ್ಷಣೆ ಹೆಸರಿನಲ್ಲಿ ಕಾಡಾನೆಗಳ ಸಾವು

ಬೆಳೆ ರಕ್ಷಣೆ ಹೆಸರಿನಲ್ಲಿ ಕಾಡಾನೆಗಳ ಸಾವು

ಚಾಮರಾಜನಗರ, ಫೆ. 29: ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ರಕ್ಷಣೆ ಸರ್ಕಾರ ಎಷ್ಟೇ ಕ್ರಮ ಕೈಗೊಂಡಿದ್ದರೂ ಸಹ ಪ್ರಾಣಿಗಳನ್ನು ರಕ್ಷಿಸಲು ಆಗುತ್ತಿಲ್ಲ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.

ಹೌದು, ಕಾಡು ಪ್ರಾಣಿಗಳ ರಕ್ಷಣೆಗೆ ಸರ್ಕಾರ ಎಷ್ಟೇ ಕ್ರಮ ಕೈಗೊಂಡರೂ ಅದು ಸಾಧ್ಯವಾಗುತ್ತಿಲ್ಲ. ಬೆಳೆ ರಕ್ಷಣೆ ಹೆಸರಿನಲ್ಲಿ ಪ್ರಾಣಿಗಳ ಮಾರಣಹೋಮ ಸಾಗಿಯೇ ಇದೆ. ಈಗ ಚಾಮರಾಜ ನಗರದಲ್ಲಿ ಇಂಥದ್ದೇ ಘಟನೆ ನಡೆದಿದೆ. ಮನುಷ್ಯ ಮಾಡಿದ ತಪ್ಪಿಗೆ 2 ಗಂಡಾನೆಗಳು ಮೃತಪಟ್ಟಿವೆ.

ಹಾಗೂ ತಮಿಳುನಾಡಿನ ತಾಳವಾಡಿಗೆ ಹೊಂದಿಕೊಂಡಿರುವ ಕರಳವಾಡಿಯಲ್ಲಿ ಈ ಘಟನೆ ನಡೆದಿದೆ. ಬೆಳೆ ರಕ್ಷಣೆಗೆಂದು ಜಮೀನಿನ ಸುತ್ತ ಅಕ್ರಮವಾಗಿ ತಂತಿಬೇಲಿ ಹಾಕಲಾಗಿತ್ತು. ಇದಕ್ಕೆ ಹೈ ಟೆನ್ಶನ್ ವಿದ್ಯುತ್ ಸಂಪರ್ಕ ಮಾಡಲಾಗಿತ್ತು. ಆಹಾರ ಅರಸಿ ಬಂದ ಕಾಡಾನೆಗಳಿಗೆ ವಿದ್ಯುತ್ ತಗುಲಿ ಮೃತಪಟ್ಟಿವೆ.

ಮೃತಪಟ್ಟ ಗಳ ವಯಸ್ಸು 20 ವರ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಜಮೀನು ಮಾಲೀಕ ಪಳನಿಸ್ವಾಮಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸತ್ಯಮಂಗಲಂ ಅರಣ್ಯಾಧಿಕಾರಿಗಳ ಭೇಟಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos