ಅಧಿಕಾರಿಗಳಿಗೆ ಡಿಸಿಎಂ ತಾಕೀತು

  • In State
  • July 3, 2020
  • 204 Views
ಅಧಿಕಾರಿಗಳಿಗೆ ಡಿಸಿಎಂ ತಾಕೀತು

ಬೆಂಗಳೂರು: ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಕೋವಿಡ್ 19 ಸ್ಥಿತಿಗತಿ ಬಗ್ಗೆ ಸ್ಥಳೀಯ ಪಾಲಿಕೆ ಸದಸ್ಯರು , ಅಧಿಕಾರಿಗಳ ಜತೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಚರ್ಚೆ ನಡೆಸಿದರಲ್ಲದೆ, 24/7 ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು.

ಕ್ಷೇತ್ರದಲ್ಲಿನ ಸೋಂಕಿತರ ಪ್ರಮಾಣ, ಆಸ್ಪತ್ರೆ ಬೆಡ್ ಗಳು, ಗಂಟಲು ದ್ರವ ಸಂಗ್ರಹ, ಫೀವರ್ ಕ್ಲಿನಿಕ್ಕುಗಳ ನಿರ್ವಹಣೆ, ಆಂಬುಲೆನ್ಸುಗಳ ಸೌಲಭ್ಯ ಸೇರಿ ಎಲ್ಲ ವಿಷಯಗಳ ಬಗ್ಗೆಯೂ ಡಿಸಿಎಂ ಪರಿಶೀಲನೆ ನಡೆಸಿದರಲ್ಲದೆ, ಕ್ಷೇತ್ರದಲ್ಲಿ ಇತ್ತೀಚೆಗೆ ಸೋಂಕಿತರು ಹೆಚ್ಚುತ್ತಿದ್ದು ಸಾವುಗಳು ಕೂಡ ಜಾಸ್ತಿಯಗುತ್ತಿವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಸಮರ್ಪಕವಾಗಿ ಕೆಲಸ ಮಾಡಬೇಕು. ಇದಕ್ಕೆ ಪಾಲಿಕೆ ಸದಸ್ಯರು ತಮಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಎಂದು ಅಧಿಕಾರಿಗಳಿಗೆ ಡಿಸಿಎಂ ಹೇಳಿದರು.

ಸರಕಾರಿ ಆಸ್ಪತ್ರೆಗಳಲ್ಲಿ ಬೆಡ್ಡುಗಳು ಮುಗಿದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಪಡೆಯಿರಿ. ದೊಡ್ಡ ದೊಡ್ಡ ಹೊಟೇಲುಗಳನ್ನು ಗುರುತಿಸಿ. ವೈದ್ಯರು, ನರ್ಸುಗಳು, ಔಷಧಿ, ಆಂಬುಲೆನ್ಸ್ ಕೊರತೆಯಗದಂತೆ ನೋಡಿಕೊಳ್ಳಿ. ಅದೇ ರೀತಿ ಕೋವಿಡ್ ರಹಿತ ರೋಗಿಗಳಿಗೂ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಸೋಂಕಿತರಿಗೆ ಆನ್ ಲೈನ್ ಮೂಲಕ ಚಿಕಿತ್ಸೆ ನೀಡುತ್ತಿರುವ ಎಲ್ಲ ವೈದ್ಯರ ಬಗ್ಗೆ ಡಿಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಎಲ್ಲ ವೈದ್ಯರು ತಪ್ಪದೇ ಪಿಪಿಎ ಕಿಟ್ಟುಗಳನ್ನು ಧರಿಸಬೇಕು. ಸೋಂಕಿತರನ್ನು ರಕ್ಷಿಸುವುದರ ಜತೆಗೆ ತಮ್ಮನ್ನೂ ರಕ್ಷಿಸಿಕೊಳ್ಳಬೇಕು. ಕೋವಿಡ್ ಸೋಂಕಿತರನ್ನು ನೋಡುತ್ತಿರುವ ವೈದ್ಯರಿಗೂ ವಿಮೆ ಸೌಲಭ್ಯ ಇದೆ. ಜತೆಗೆ, ಖಾಸಗಿ ಆಸ್ಪತ್ರೆಗಳಿಗೆ ಸರಕಾರದ ನಿಯಮದಂತೆ ಹಣ ಪಾವತಿ ಮಾಡಲಾಗುವುದು ಎಂದು ಡಿಸಿಎಂ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ನ ವೈದ್ಯರು ಮತ್ತು ನರ್ಸ್ ಗಳನ್ನು ಗುರುತಿಸಿ, ಅಗತ್ಯಬಿದ್ದಾಗ ಬಳಸಿಕೊಳ್ಳಬೇಕು ಎನ್ನುವ ಸಲಹೆ‌ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos