ಸ್ವಚ್ಛತಾಭಿವೃದ್ದಿಗೆ ಚಾಲನೆ ನೀಡಿದ ಡಿಸಿ

ಸ್ವಚ್ಛತಾಭಿವೃದ್ದಿಗೆ ಚಾಲನೆ ನೀಡಿದ ಡಿಸಿ

ಕೋಲಾರ: ಆಸ್ಪತ್ರೆ ಅಭಿವೃದ್ದಿಗೆ ಸಹಕರಿಸಿದ ಜಿಲ್ಲಾಧಿಕಾರಿಗಳು ಸಹ ಕೆಲವರು. ಕೋಲಾರ ಜಿಲ್ಲಾಧಿಕಾರಿ ಸಿ ಸತ್ಯಭಾಮ ಆಸ್ಪತ್ರೆಗೆ ಬೇಟಿ ನೀಡಿ ಸ್ವಚ್ಚತಾ ಕಾರ್ಯ ಹಾಗೂ ವಿವಿಧ ಅಬಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಿದರು.

ಮೊದಲಿಗೆ ಶುದ್ದ ನೀರಿನ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆಸ್ಪತ್ರೆಯ ಸುತ್ತ ವಿವಿಧ ಘಟಕಗಳಿಗೆ ಬೇಟಿ ನೀಡಿ ಪರೀಶಿಲಿ ಆಸ್ಪತ್ರೆಯ ಸುತ್ತ ಬಿದಿದ್ದ ಕಸದ ರಾಶಿ, ನಿರುಪಯುಕ್ತ ವಸ್ತುಗಳು ತೆರವುಗೊಳಿಸಲು ನಗರಸಭೆ ಆಯುಕ್ತರಿಗೆ ಸೂಚಿಸಿದರು.
ಆಸ್ಪತ್ರೆ ಮೇಲೆ ಮಳೆಕೊಯ್ಲು ಪದ್ದತಿಯಲ್ಲಿ ನೀರು ಶೇಖರಣೆ ಮಾಡಲು, ಹೈಮಾಸ್ ದೀಪ ಅಳವಡಿಕೆ, ಮತ್ತು ಮೇಲ್ಚಾಚಣಿಯಲ್ಲಿ ಬಿದ್ದಿರುವ ಕಸ ಹಾಗೂ ಗಿಡ ಗಂಟೆಗಳನ್ನು ತೆಗೆಯಲು ತಿಳಿಸಿದ್ದರಲ್ಲದೆ ಆಸ್ಪತ್ರೆಯಲ್ಲಿ ಶಿಥಿಲವಾಗಿರುವ ವಸ್ತುಗಳನ್ನು ಶಿಘ್ರ ಹರಾಜು ಮೂಲಕ ವಿಲೇವಾರಿ ಮಾಡಲು ಕ್ರಮ ವಹಿಸಲು ಸೂಚಿಸಿದರು.
ಆಸ್ಪತ್ರೆಯ ಓಲಾಂಗಣದಲ್ಲಿ ಬಾಡಿಗೆಗೆ ನೀಡಿರುವ ಅಂಗಡಿಗಳಿಂದ ಕಡಿಮೆ ಬಾಡಿಗೆ ಬರುತ್ತಿದ್ದು ಇದನ್ನು ಏರಿಸುವ ಬಗ್ಗೆ ಕ್ರಮ ವಹಿಸಬೇಕೆಂದರು .
ಆಸ್ಪತ್ರೆಯ ವೈದ್ಯರು ಸಿಬ್ಬಂದಿ ವಾಸಿಸುವ ಗೃಹಗಳಿಗೆ ಬೇಟಿ ನೀಡಿ ಪರೀಶಿಲಿಸಿ ವಾರದ ರಜಾ ದಿನಗಳಲ್ಲಿ ಶ್ರಮದಾನದ ಮೂಲಕ ಮನೆಯ ಸುತ್ತ ಸ್ವಚ್ಛತಾ ಕಾರ್ಯಗಳನ್ನು ಮಾಡಿಕೊಳ್ಳಲು ಮತ್ತು ಯುಜಿಡಿ ಸಮಸ್ಯ ಬಗ್ಗೆ ನಗರಸಭೆ ಎರಡು ದಿನಕೊಮ್ಮೆ ತೆರವುಗೊಳಿಸಲು ಹೆಳಿದರು.

ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಮಾಡಿ
ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ಸಂಬಂಧಿಕರಿಗೆ ಪ್ರತ್ಯೇಕವಾಗಿ ಹೆಂಗಸರಿಗೆ ಮತ್ತು ಗಂಡಸರಿಗೆ ತಲಾ೧೦ ಶೌಚಗೃಹಗಳನ್ನು ನಿರ್ಮಾಣ ಮಾಡಬೇಕು ಅದರಲ್ಲಿ ದಿವ್ಯಾಂಗರಿಗೆ , ಮಕ್ಕಳಿಗೆ ಮತ್ತು ಕೆಲವನ್ನು ವಿದೇಶಿಯ ಹಾಗೂ ದೇಶಿಯ ರೀತಿಯಲ್ಲಿ ಬಳಕೆ ಮಾಡುವಚಿತಿರಲಿ ಹಾಗೂ ಶೌಚಾಲಯಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಬಗ್ಗೆ ಕ್ರಮವಹಿಸಲು ಸೂಚಿಸದರು.

 

ಫ್ರೆಶ್ ನ್ಯೂಸ್

Latest Posts

Featured Videos