ಮಗಳ ಫೋಟೋ ನೋಡಿ ಶಮ್ಮಿ ಫಿದಾ .!

ಮಗಳ ಫೋಟೋ ನೋಡಿ ಶಮ್ಮಿ ಫಿದಾ .!

ನವದೆಹಲಿ, . 31 : ನ್ಯೂಜಿಲೆಂಡ್​ ವಿರುದ್ಧದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ಭಾರತದ ರೋಚಕವಾಗಿ ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲಿ ಒಬ್ಬರಾದ ಮೊಹಮ್ಮದ್ ಶಮಿ, ತಮ್ಮ ಮಗಳ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ನ್ಯೂಜಿಲೆಂಡ್‌ ವಿರುದ್ಧದ ಪ್ರವಾಸದಲ್ಲಿರುವ ಶಮಿ ತಮ್ಮ ಮಗಳ ಹಸೀನ್ ಚಿತ್ರವವನ್ನು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

 

ಈ ಪೊಟೋದಲ್ಲಿರುವ ಹಸೀನ್ ಹಳದಿ ಸೀರೆ ಧರಿಸಿರುವುದನ್ನು ನಾವು ಕಾಣಬಹುದು. ಅಲ್ಲದೇ ಈ ಪೊಟೋವನ್ನ ಶಿರ್ಷಿಕೆಯೊಂದಿಗೆ  ಪೋಸ್ಟ್ ಮಾಡಿದ್ದು, ನಿನ್ನ ನೋಟ ತುಂಬಾ ಚೆನ್ನಾಗಿದೆ ಮಗಳೆ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ದೇವರು ಒಳ್ಳೆಯದು ಮಾಡಲಿ ಮಗಳೇ, ಆದಷ್ಟು ಬೇಗನೇ ನಿನ್ನನ್ನು ನೋಡುತ್ತೇನೆ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos