ದಸರಾ ಮಹೋತ್ಸವ

ದಸರಾ ಮಹೋತ್ಸವ

ಹುಳಿಯಾರು: ಹೋಬಳಿ ಯಳನಾಡು ಗ್ರಾಮದಲ್ಲಿ ಶ್ರೀ ಗುರುಸಿದ್ಧರಾಮೇಶ್ವರಸ್ವಾಮಿಯವರ ದಸರಾ ಮಹೋತ್ಸವವನ್ನು ಅ.೨೫ ರ ಭಾನುವಾರ ಮತ್ತು ಅ.೨೬ ರ ಸೋಮವಾರ ಏರ್ಪಡಿಸಲಾಗಿದೆ.
ಅ.೨೫ ರಂದು ಆಯುಧ ಪೂಜೆ ಮತ್ತು ರುದ್ರಾಭಿಷೇಕ, ಅ.೨೬ ರಂದು ಹಣ್ಣುಕಾಯಿ ಸೇವೆ, ವಿಜಯದಶಮಿ, ಅಂಬಿನಸೇವೆ, ಗಂಗಮ್ಮನ ಕೆರೆ ಸೇವೆ ನಡೆಯಲಿದೆ.
ರಾತ್ರಿ ಅವಭೃತ ಸ್ನಾನ, ನಡೆಮುಡಿ ಉತ್ಸವದೊಂದಿಗೆ ಮೂಲಸ್ಥಾನಕ್ಕೆ ಬಿಜಯಂಗೈಯವ ಮೂಲಕ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುವುದು. ಭಕ್ತಾಧಿಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಧರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸುವಂತೆ ದಸರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos