ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿರುವ ನಟ ದರ್ಶನ್ ಅವರಿಗೆ ಆರೋಗ್ಯದ ಸಮಸ್ಯೆ ಇರುವುದರಿಂದ ಅವರಿಗೆ ಸರ್ಜಿಕಲ್ ಚೇರ್ ಬೇಕೆಂದು ಮನವಿ ಮಾಡಿದ್ದರು. ಮನವಿ ಮೇರೆಗೆ ಇದೀಗ ನಟ ದರ್ಶನ್ ಅವರಿಗೆ ಸರ್ಜಿಕಲ್ ಚೇರ್ ನೀಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಹೌದು, ನಟ ದರ್ಶನ್ ಅವರಿಗೆ ವೈದ್ಯರ ವರದಿಗಳನ್ನು ಪರಿಶೀಲಿಸಿದ ಬಳಿಕ ಸರ್ಜಿಕಲ್ ಚೇರ್ ನೀಡಲು ಅನುಮತಿ ಸಿಕ್ಕಿದೆ. ಇದಕ್ಕಾಗಿ 2 ವರದಿಗಳನ್ನು ಪರಿಶೀಲಿಸಲಾಗಿತ್ತು. ದರ್ಶನ್ ಕುಟುಂಬಸ್ಥರು ನೀಡಿದ ವರದಿ ಹಾಗೂ ಪರಪ್ಪನ ಅಗ್ರಹಾರ ಜೈಲಿನಿಂದ ಕೊಟ್ಟ ವರದಿಯನ್ನೂ ಪರಿಶೀಲಿಸಿದ ಬಳಿಕ ನಟನಿಗೆ ಸರ್ಜಿಕಲ್ ನೀಡಲು ಅಪ್ರೂವಲ್ ಸಿಕ್ಕಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ದರ್ಶನ್ಗೆ ಸರ್ಜಿಕಲ್ ಚೇರ್ ನೀಡಲು ಸಿದ್ಧತೆ ನಡೆದಿದೆ. ಬಳ್ಳಾರಿ ಜೈಲಿನಲ್ಲಿ ವೈದ್ಯರು ದರ್ಶನ್ಗೆ ಹೆಲ್ತ್ ಚೆಕಪ್ ಮಾಡಿದ್ದಾರೆ. ಇದನ್ನೂ ಓದಿ: ನಾವು ಬೆಳಗ್ಗೆ ಎದ್ದು ಮೇಕಪ್ ಹಾಕಿಕೊಳ್ಳುವುದೇ ನಿಮಗಾಗಿ: ಸುದೀಪ್
ದರ್ಶನ್ಗೆ ಆರೋಗ್ಯ ಸಮಸ್ಯೆ ಇದೆ. ಜೈಲು ಸೇರುವುದಕ್ಕೂ ಮುನ್ನ ಅವರ ಕೈಗೆ ಸರ್ಜರಿ ಆಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ತೂಕ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಹಾಗಾಗಿ ಮನೆ ಊಟಕ್ಕೆ ಮನವಿ ಮಾಡಿದ್ದರು. ಆದರೆ ಜೈಲಿನ ನಿಯಮ ಉಲ್ಲಂಘನೆ ಮಾಡಿದ ವಿಷಯ ಬಹಿರಂಗ ಆದಾಗ ಅನಾರೋಗ್ಯದ ಬಗ್ಗೆ ಅನುಮಾನ ಮೂಡಿವಂತಾಯಿತು.