ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್; ಜೈಲು ಮುಂದೆ ಜನವೋ ಜನ..!

ಬಳ್ಳಾರಿ ಸೆಂಟ್ರಲ್ ಜೈಲಿಗೆ ದರ್ಶನ್ ಶಿಫ್ಟ್; ಜೈಲು ಮುಂದೆ ಜನವೋ ಜನ..!

ಬಳ್ಳಾರಿ: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರಿಗೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಕಲ ಸೌಲಭ್ಯಗಳನ್ನು ಒದಗಿಸಿ ಕೊಡಲಾಗುತ್ತಿದೆ ಎಂಬ ಮಾಹಿತಿ ಬಿತ್ತರವಾಗುತ್ತಿದ್ದಂತೆ ಇದೀಗ ಎಚ್ಚೆತ್ತುಕೊಂಡ ಜೈಲು ಅಧಿಕಾರಿಗಳು ನಟ ದರ್ಶನ್ ಅವರನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್  ಮಾಡಲು ಎಲ್ಲ ರೀತಿ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇನ್ನು ದರ್ಶನ್ ಅಭಿಮಾನಿಗಳು ಬಳ್ಳಾರಿ ಸೆಂಟ್ರಲ್ ಜೈಲು ಮುಂದೆ ಜಮಾಯಿಸಿದ್ದು ನೆಚ್ಚಿನ ನಾಯಕನನ್ನು ನೋಡಲು ನಾ ಮುಂದು ತಾ ಮುಂದು ಎಂದು ಕಾಯುತ್ತಿದ್ದಾರೆ.

ಹೌದು, ಬಳ್ಳಾರಿ ಜಿಲ್ಲೆ ಸೇರಿದಂತೆ ನಾನಾ ಕಡೆಯಿಂದ ಆಗಮಿಸಿರುವ ಅಭಿಮಾನಿಗಳು ಜೈಲು ಪ್ರವೇಶ ದ್ವಾರದ ಮುಂದೆಯೇ ನಿಂತು ದರ್ಶನ್ ಬರುವಿಕೆಗಾಗಿ ಕಾಯುತ್ತಿದ್ದಾರೆ‌. ಕಾರಗೃಹ ಪ್ರವೇಶ ಮಾರ್ಗದ ಎರಡು ರಸ್ತೆಗಳನ್ನು ಬ್ಯಾರಿಕೇಡ್ ಮೂಲಕ ಬಂದ್ ಮಾಡಿದ್ದರೂ, ವಾಹನಗಳನ್ನು ಬಿಟ್ಟು ಒಂದು ಕಿ.ಮೀ.ವರೆಗೆ ನಡೆದುಕೊಂಡು ಬಂದು ಜಮಾಯಿಸಿದ್ದಾರೆ. ಸ್ವತಃ ಎಸ್ಪಿ‌ ಡಾ.ಶೋಭರಾಣಿ‌ ಸೇರಿ ಇತರೆ ಸಿಪಿಐ ಸೇರಿ ಪೋಲೀಸ್ ಸಿಬ್ಬಂದಿಗಳು ಅಭಿಮಾನಿಗಳನ್ನು ಚದುರಿಸುವ ಪ್ರಯತ್ನ ಮಾಡಿದರೂ ಅಭಿಮಾನಿಗಳು ಜಾಗ ಕದಲಿಲ್ಲ.

ಮಾಧ್ಯಮಗಳ ಮುಂದೆ ಮಾತನಾಡಿದ ಅಭಿಮಾನಿಗಳು ದರ್ಶನ್ ಎಲ್ಲಿದ್ದರೂ ನಮಗೆಲ್ಲ ಡಿ‌ಬಾಸ್. ಅವರನ್ನು ‌ಬೇರೆಯದ್ದೇ ರೀತಿಯಾಗಿ ಬರಮಾಡಿಕೊಳ್ಳಬೇಕಿತ್ತು. ಆದರೆ ಜೈಲಿಗೆ ಬರುವುದನ್ನು ನೋಡಬೇಲಾಗಿದೆ ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos