ಮನ ಸೆಳೆಯುವ ಲಕ್ಕವಳ್ಳಿ ಡ್ಯಾಮ್

ಮನ ಸೆಳೆಯುವ ಲಕ್ಕವಳ್ಳಿ ಡ್ಯಾಮ್

ಚಿಕ್ಕಮಗಳೂರು, ಡಿ. 04: ಲಕ್ಕವಳ್ಳಿ ಒಂದು ಹೋಬಳಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿದೆ. ಈ ಪ್ರದೆಶದಲ್ಲಿ ಭಧ್ರಾ ನದಿಗೆ ಕಟ್ಟಲಾಗಿರುವ ಅಣೆಕಟ್ಟು “ಲಕ್ಕವಳ್ಳಿ ಡ್ಯಾಮ್” ಎಂದೆ ಪ್ರಸಿದ್ಧಿ ಪಡೆದಿದೆ. ಈ ವಿವಿಧೋದ್ದೇಶದ ಅಣೆಕಟ್ಟು ಮುಖ್ಯವಾಗಿ ಕೃಷಿ ಮತ್ತ್ತು ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತಿದೆ. ಪ್ರಖ್ಯಾತ ಕುವೆಂಪು ವಿಶ್ವವಿದ್ಯಾಲಯವು ಇಲ್ಲಿಂದ 4 ಮೈಲಿ ದೂರದಲ್ಲಿದ್ದು, ರಾಜ್ಯದ ಪ್ರತಿಷ್ಠಿತ ಕಲಿಕಾ ಮತ್ತು ಸಂಶೊಧನಾ ಕೇಂದ್ರವಾಗಿದೆ.

ಜಲಾಶಯದ ನೋಟ, ಸುತ್ತಲಿನ ಹಸಿರು ಪರಿಸರ, ಬೆಟ್ಟ, ಗುಡ್ಡಗಳು ನಿಮ್ಮನ್ನು ಸೆಳೆಯುತ್ತವೆ. ಭದ್ರಾ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿಗೆ ಇದು ನೀರಾವರಿ ಸೌಲಭ್ಯ ಒದಗಿಸಿದೆ. ಅಲ್ಲದೇ, ಹಲವು ಊರುಗಳಿಗೆ ಕುಡಿಯುವ ನೀರಿಗೂ ಭದ್ರಾ ಜಲಾಶಯವನ್ನು ಅವಲಂಬಿಸಲಾಗಿದೆ. ಮಳೆಗಾಲದಲ್ಲಿ ಡ್ಯಾಂಗೆ ಹೆಚ್ಚು ನೀರು ಹರಿದುಬರುತ್ತದೆ. ಜಲಾಶಯ ತುಂಬಿದ ಸಂದರ್ಭದಲ್ಲಿ ನೀರು ಹೊರಬಿಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ.

ಭದ್ರಾ ಜಲಾಶಯಕ್ಕೆ ಸಮೀಪದಲ್ಲಿ ಕುವೆಂಪು ವಿಶ್ವವಿದ್ಯಾಲಯ ಇದೆ. ಇಲ್ಲಿನ ಕ್ಯಾಂಪಸ್ ಮನಸೆಳೆಯುವಂತಿದೆ. ಭದ್ರಾ ಅಭಯಾರಣ್ಯ, ಜಂಗಲ್ ರೆಸಾರ್ಟ್ ಕೂಡ ಇದ್ದು, ನೋಡಬಹುದಾದ ಸ್ಥಳಗಳಾಗಿವೆ.

ಫ್ರೆಶ್ ನ್ಯೂಸ್

Latest Posts

Featured Videos