ಮೂರು ತಿಂಗಳು ಸಿಲಿಂಡರ್ ಫ್ರೀ

ಮೂರು ತಿಂಗಳು ಸಿಲಿಂಡರ್ ಫ್ರೀ

ಬೆಂಗಳೂರು, ಏ. 13 : ಉಜ್ವಲಾ ಯೋಜನೆಯ ಫಲಾನುಭವಿಗಳಿಗಾಗಿ ಮೋದಿ ಸರ್ಕಾರ ಮೂರು ತಿಂಗಳ ಉಚಿತ ಅನಿಲ ನೀಡುವುದಾಗಿ ಘೋಷಿಸಿದೆ.
ಏ. 1 ರಿಂದ ಜೂನ್ 30 ರವರೆಗೆ ಜಾರಿಯಲ್ಲಿರುತ್ತದೆ. ತೈಲ ಕಂಪನಿಗಳು ಉಜ್ವಲಾ ಯೋಜನೆಯ ಸುಮಾರು 7.15 ಕೋಟಿ ಫಲಾನುಭವಿಗಳ ಖಾತೆಗೆ 5,606 ಕೋಟಿ ರೂಪಾಯಿ ಹಾಕಲಾಗಿದೆ.
ಇದರ ಅಡಿಯಲ್ಲಿ ಕಂಪನಿಗಳು ಪ್ಯಾಕೇಜ್ ಪ್ರಕಾರ 14.2 ಕೆಜಿ ಅಥವಾ ಐದು ಕೆಜಿ ಸಿಲಿಂಡರ್ ಮೌಲ್ಯಕ್ಕೆ ಸಮಾನವಾದ ಮುಂಗಡವನ್ನು ಫಲಾನುಭವಿಯ ಖಾತೆಯಲ್ಲಿ ಜಮಾ ಮಾಡುತ್ತವೆ. ಈ ಮೊತ್ತದೊಂದಿಗೆ ಗ್ರಾಹಕರು ಸಿಲಿಂಡರ್ ಪಡೆಯಬಹುದು.
ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ನಂತಹ ಕಂಪನಿಗಳು ಈಗಾಗಲೇ ವಿತರಣಾ ಬಾಯ್ ಗಳು ಸೇರಿದಂತೆ ಪೂರೈಕೆ ಸರಪಳಿಯ ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಉದ್ಯೋಗಿಗಳಿಗೆ ಐದು ಲಕ್ಷ ರೂಪಾಯಿ ವಿಮೆ ಘೋಷಣೆ ಮಾಡಿದೆ. ಒಂದು ವೇಳೆ ಕೊರೊನಾ ಸೋಂಕಿನಿಂದ ಸಿಬ್ಬಂದಿ ಸಾವನ್ನಪ್ಪಿದ್ರೆ ಕುಟುಂಬಸ್ಥರಿಗೆ ವಿಮೆ ಹಣ ಸಿಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos