ಕರ್ಫ್ಯೂ : ದಂಡ ವಸೂಲಿ

ಕರ್ಫ್ಯೂ : ದಂಡ ವಸೂಲಿ

ಹಾವೇರಿ : ಕೊರೋನಾ ಹೊಡೆದೊಡಿಸುವ ನಿಟ್ಟಿನಲ್ಲಿ ಸರ್ಕಾರ ಘೋಷಿಸಿದ್ದ ಸಂಡೇ ಕರ್ಫ್ಯೂಗೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಕರ್ಫ್ಯೂ ಹಿನ್ನೆಲೆ ಅನಗತ್ಯವಾಗಿ ಸಂಚರಿಸಲು ಯತ್ನಿಸಿದ ೬೩ ಬೈಕ್‌ಗಳನ್ನು ತಡೆದ ಪೊಲೀಸರು ೨೮,೩೦೦ ರೂ. ದಂಡ ವಸೂಲಿ ಮಾಡಿದ್ದಾರೆ.
ಮಾಸ್ಕ್ ಧರಿಸಿದೇ ಸಂಚರಿಸುತ್ತಿದ್ದ ೩೮ ಜನರಿಂದ ೬೪೦೦ ರೂ.  ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರ, ಗ್ರಾಮೀಣ ಪ್ರದೇಶಗಳು ಸಂಪೂರ್ಣ ಸ್ತಬ್ಧಗೊಂಡಿತ್ತು.

ಕರ್ಫ್ಯೂ ಹಿನ್ನೆಲೆ ಜಿಲ್ಲೆಯ ತಾಲೂಕುಗಳಲ್ಲಿ  ಬೆಳಗ್ಗೆಯಿಂದಲೇ ಬಸ್ ‌ಸಾರಿಗೆ, ಆಟೋ, ಟ್ಯಾಕ್ಸಿ, ಹೋಟೆಲ್, ತರಕಾರಿ, ಕಿರಾಣಿ ಸೇರಿದಂತೆ ಎಲ್ಲ ವ್ಯಾಪಾರ-ವ್ಯವಹಾರ ಬಂದ್ ಆಗಿತ್ತು.

ಫ್ರೆಶ್ ನ್ಯೂಸ್

Latest Posts

Featured Videos