ತಂದೆ-ತಾಯಿ ಗುರುಗಳನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಿ

ತಂದೆ-ತಾಯಿ ಗುರುಗಳನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳಿ

ಚಿಕ್ಕೋಡಿ, ಫೆ. 08: ತಂದೆ-ತಾಯಿ ಗುರು-ಹಿರಿಯರನ್ನು ಗೌರವಿಸುವ ಸಂಸ್ಕೃತಿ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಇಂದಿನ ಯುವ ಪೀಳಿಗೆಯ ಜವಾಬ್ದಾರಿಯಾಗಿದೆ ಎಂದು ಉಪನ್ಯಾಸಕ ಸಾಹಿತಿ ಡಾ ಆರ್ ಎಸ್ ದೊಡ್ಡನಿಂಗಪ್ಪಗೋಳ  ಹೇಳಿದ್ದಾರೆ.

ಅಥಣಿ ತಾಲೂಕಿನ ಅಡಹಳ್ಳಿ ಸರಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕ ದಿನಾಚರಣೆ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಉತ್ತಮ ರೈತ ಫಲವತ್ತಾದ ಭೂಮಿಯಲ್ಲಿ ಉತ್ತಮ ಫಸಲು ತೆಗೆಯುವಂತೆ ಉತ್ತಮ ಉಪನ್ಯಾಸಕರು ವಿದ್ಯಾರ್ಥಿಗಳ ಬಾಳಿನಲ್ಲಿ ಬೆಳಕು ನೀಡುತ್ತಾರೆ ಸಾಧಕ ವಿದ್ಯಾರ್ಥಿಗಳನ್ನು ನಿರ್ಮಿಸುತ್ತಾರೆ ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಯಶಸ್ಸು ಗಳಿಸಲು ಸಾಧ್ಯ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳು ಕಷ್ಟಕ್ಕೆ  ಹೆದರದೆ ಕೀಳರಿಮೆ ಮನೋಭಾವವನ್ನು ಹೊಂದದೆ ಸತತ ಪರಿಶ್ರಮದಿಂದ ಸಾಧಕರಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್ಎಲ್ ಬಣಜವಾಡ ಅವರು ಮಾತನಾಡುತ್ತಾ ಈ ಭೂಮಿಯಲ್ಲಿ ಬಡವರಾಗಿ ಅಥವಾ ಶ್ರೀಮಂತರಾಗಿ ಹುಟ್ಟುವುದು ತಪ್ಪಲ್ಲ ಬಡವರಾದರೆ ಶ್ರೀಮಂತರಾಗುವ ಅವಕಾಶವನ್ನು ದೇವರು ಕೊಟ್ಟಿದ್ದಾನೆ ಎಂದು ಭಾವಿಸಿ ಶ್ರೀಮಂತರಾದರೆ ಬಡವರಿಗೆ ಸಹಾಯ ಮಾಡುವ ಅವಕಾಶವನ್ನು ಕೊಟ್ಟಿದ್ದಾನೆ ಎಂದು ಭಾವಿಸಿ ಮಾನವೀಯತೆ ಅಳವಡಿಸಿಕೊಳ್ಳುವ ಮೂಲಕ ಸಮಾಜಮುಖಿಯಾಗಿ ಬದುಕಬೇಕು ವಿದ್ಯಾರ್ಥಿಗಳು ಸತತ ಪರಿಶ್ರಮದ ಮೂಲಕ ಉನ್ನತ ಸಾಧನೆ ಮಾಡಿ ಮಹಾನ್ ಸಾಧಕರಾಗಿ ಹೊರಹೊಮ್ಮಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಂ ಡಿ ತಳಕೇರಿ ಉಪನ್ಯಾಸಕಿಯರಾದ ರೂಪಾ ಕೋಹಳ್ಳಿ ವಿದ್ಯಾ ಬಡಕಂಬಿ ಶೋಭಾ ಮಾದರ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos