ಇಬ್ಬರು ಗರ್ಭಿಣಿಯರಿಗೆ ಸೋಂಕು

  • In State
  • August 5, 2020
  • 143 Views
ಇಬ್ಬರು ಗರ್ಭಿಣಿಯರಿಗೆ ಸೋಂಕು

ಹೆಬ್ಬೂರು:ಗ್ರಾಮದಲ್ಲಿ ಮೂರು ಕೋವಿಡ್ ಪ್ರಕರಣ ವರದಿಯಾಗಿದ್ದು, ಒಂಭತ್ತು ತಿಂಗಳ ತುಂಬು ಗರ್ಭಿಣಿ (೨೬ ವರ್ಷ), ಆಕೆಯ ಪತಿ (೨೯ ವರ್ಷ) ಹಾಗೂ ಆರು ತಿಂಗಳ ಗರ್ಭಿಣಿಗೆ ಕೋವಿಡ್ ಸೋಂಕು ತಗುಲಿದೆ.

ಚೊಚ್ಚಲ ಹೆರಿಗೆ ಮಾಡಿಸಲು ಖಾಸಗಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ದಂಪತಿಗಳ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಹೆರಿಗೆಯ ದಿನಗಣನೆಯಲ್ಲಿ ತಮ್ಮ ಕನಸಿನ ಕೂಸನ್ನ ಪಡೆಯಲು ಹವಣಿಸುತ್ತಿದ್ದ ದಂಪತಿಗಳು ಈ ವರದಿಯಿಂದ ಭಯಭೀತರಾಗಿದ್ದಾರೆ.

ಸೋಂಕಿತರ ಮನೆಯ ಸುತ್ತಮುತ್ತ ಸೀಲ್‌ಡೌನ್ ಮಾಡಿ ಕಂಟೈನ್ಮೆಂಟ್ ಪ್ರದೇಶವನ್ನಾಗಿ ಘೋಷಿಸಲಾಯಿತು. ಸೋಮವಾರ ೫೫ ವರ್ಷದ ಸೋಂಕು ತಗುಲಿದ ವ್ಯಕ್ತಿಯ ಪ್ರಾರ್ಥಮಿಕ ಸಂಪರ್ಕದಲ್ಲಿದ್ದ ಆರು ತಿಂಗಳ ಗರ್ಭಿಣಿ ಸೊಸೆಗೆ (೨೭ ವರ್ಷ) ಕೊರೋನಾ ಪಾಸಿಟಿವ್ ವರದಿ ಬಂದಿದೆ. ಈ ಮೂವರನ್ನ ತುಮಕೂರಿನ ಕೋವಿಡ್ ಆಸ್ಪತ್ರಗೆ ದಾಖಲಿಸಲಾಗಿದೆ. ೩ ಪಾಸಿಟಿವ್ ಸುದ್ದಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಿಸಿತು. ಗ್ರಾಮದಲ್ಲಿ ಒಟ್ಟು ೭ ಕೋವಿಡ್ ಪ್ರಕರಣವಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಕೃಷ್ಣಪ್ಪ, ಲೆಕ್ಕಾಧಿಕಾರಿ ಮಹದೇವಯ್ಯ, ಆರೋಗ್ಯ ಇಲಾಖೆಯ ಎಲ್.ಹೆಚ್.ಸಿ.ಮಂಜುಳ, ಕಿರಿಯ ಸಹಾಯಕಿ ಅಂಜಲಾದೇವಿ, ನಂದಿನಿ, ಚೈತ್ರ  ಪೋಲಿಸ್ ಇಲಾಖೆಯ ಕೀರ್ತಿಪ್ರಸಾದ್.ಎಮ್.ಎಚ್, ಆಶಾ ಕಾರ್ಯಕರ್ತೆ ಮಂಜುಳಾ ಹಾಗೂ ಗ್ರಾಮ ಪಂಚಾಯ್ತಿ ಸಿಬ್ಬಂದಿಗಳು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos