ಪುರಸಭೆ ಸದಸ್ಯರ ಅನರ್ಹತೆಗೆ ಕೋರ್ಟ್ ತಡೆಯಾಜ್ಞೆ

ಪುರಸಭೆ ಸದಸ್ಯರ ಅನರ್ಹತೆಗೆ ಕೋರ್ಟ್ ತಡೆಯಾಜ್ಞೆ

ಗುರುಮಿಠಕಲ್: ಪಟ್ಟಣದ ಪುರಸಭೆ ಇತಿಹಾಸದಲ್ಲೇ ಮೊದಲ ಬಾರಿಗೆ ಸದ್ದುಮಾಡಿದ ಸದಸ್ಯರ ಅನರ್ಹತೆಯ ಪ್ರಕರಣಕ್ಕೆಕರ್ಲ್ಬಗಿ ಉಚ್ಛ ನ್ಯಾಯಾಲಯವು ಮೂವರು ಪುರಸಭೆ ಸದಸ್ಯರಿಗೆ ಸ, 27 ರ ವರೆಗೆ ತಡೆಯಾಜ್ಞೆ ನೀಡಿದೆ.

ಕಾಂಗ್ರೇಸ್ ಪಕ್ಷ ನೀಡಿದ್ದ ವಿಪ್ ಉಲ್ಲಂಘನೆ ಆರೋಪದಡಿಯಲ್ಲಿ ಅನರ್ಹಗೊಂಡ ಪುರಸಭೆ ಸದಸ್ಯರಾದ ಅಶೋಕ ಕಲಾಲ, ಆಶಣ್ಣ ಬುದ್ಧ, ಪವಿತ್ರಾ ಮನ್ನೆ ಎನ್ನುವವರನ್ನು ಯಾದಗಿರಿ ಜಿಲ್ಲಾಧಿಕಾರಿ ಆರ್.ರಾಗಪ್ರಿಯಾ ಅವರು ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಅನರ್ಹ ಸದಸ್ಯರು ಹೈಕೋರ್ಟ್ ಆಶ್ರಯಿಸಿದ್ದರು. ಪುರಸಭೆ ಸದಸ್ಯ ಖಾಜಾ ಮೈನೋದ್ದಿನ್ ಅವರು ಅನರ್ಹ ಸದಸ್ಯರ ಅರ್ಜಿಯನ್ನು ಅಸಿಂಧುಗೊಳಿಸುವಂತೆ ಕೇವಿಯಟ್ ಅರ್ಜಿಯನ್ನು ಸಹ ಸಲ್ಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಪೀಠವು ಸಪ್ಟಂಬರ27 ರ ವರೆಗೆ ತಡೆಯಾಜ್ಞೆ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos