ಕೂಬಿಂಗ್ ಕಾರ್ಯಾಚರಣೆ ಶುರು

ಕೂಬಿಂಗ್ ಕಾರ್ಯಾಚರಣೆ ಶುರು

ತುಮಕೂರು, ಜ. 12 : ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ನಾಲ್ಕು ಮಂದಿಯನ್ನು ಬಲಿ ಪಡೆದಿರುವ ನರಭಕ್ಷಕ ಚಿರತೆಯನ್ನು ಹಿಡಿಯಲು ಅರಣ್ಯಾಧಿಕಾರಿಗಳು ಇಂದಿನಿಂದ ಕೂಬಿಂಗ್ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.

2 ದಿನಗಳ ಹಿಂದೆ ಮಣ್ಣಕುಪ್ಪೆ ಗ್ರಾಮದ ಓರ್ವ ಬಾಲಕನನ್ನು ಚಿರತೆ ಬಲಿ ಪಡೆದಿತ್ತು. ಇದು ಚಿರತೆಯ ನಾಲ್ಕನೇ ಬಲಿಯಾಗಿತ್ತು. ಇದರಿಂದ ಗ್ರಾಮಸ್ಥರು ಭಯಭೀತಗೊಂಡಿದ್ದರು. ಕಳೆದ ಮೂರು ತಿಂಗಳಲ್ಲಿ ನರಭಕ್ಷಕ ಚಿರತೆ ಮೂವರನ್ನು ಬಲಿ ತೆಗೆದುಕೊಂಡಿದೆ. ಆದರೂ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡಿಲ್ಲ. ನರಭಕ್ಷಕ ಚಿರತೆಯನ್ನು ಹಿಡಿಯಲಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದರು. ಈ ಕೂಡಲೇ ಕಾರ್ಯಾಚರಣೆ ನಡೆಸಿ ತುಮಕೂರು ಗ್ರಾಮಾಂತರ, ಗುಬ್ಬಿ ಹಾಗೂ ಕುಣಿಗಲ್ ಭಾಗದಲ್ಲಿ ಓಡಾಡುತ್ತಿರುವ ಚಿರತೆಯನ್ನು ಸೆರೆ ಹಿಡಿಯಲು ಒತ್ತಾಯಿಸಿದ್ದರು. 15 ದಿನಗಳೊಳಗೆ ಚಿರತೆಯನ್ನು ಸೆರೆ ಹಿಡಿಯದಿದ್ದರೆ ಇನ್ನೂ ಉಗ್ರ ಹೋರಾಟದ ಎಚ್ಚರಿಕೆಯನ್ನು ಶಾಸಕ ಗೌರಿಶಂಕರ್ ಕೊಟ್ಟಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos