ಕಾರಜೋಳರ ಆಕಳಿಗೆ ಡಿಮಾಂಡ್

ಕಾರಜೋಳರ ಆಕಳಿಗೆ ಡಿಮಾಂಡ್

ವಿಜಯಪುರ, ಜ. 14 : ಡಿಸಿಎಂ ಗೋವಿಂದ ಕಾರಜೋಳ ಅವರ ಕಾಂಕ್ರೆಜ್ ಆಕಳು ಈ ಬಾರಿ ಜಾತ್ರೆಯಲ್ಲಿ ಆಕರ್ಷಣೆಗಳಲ್ಲೊಂದು. ಡಿಸಿಎಂ ಪುತ್ರ ಉಮೇಶ ಅವರು ಗುಜರಾತ್ನಿಂದ ತರಿಸಿದ ಕಾಂಕ್ರೆಜ್ ತಳಿಯ ಆಕಳು ಹಾಗೂ ಹೋರಿ ವಿಜಯಪುರ ಜಿಲ್ಲೆಯ ಅಪರೂಪದ ತಳಿ. ಈ ಭಾಗದಲ್ಲಿ ಜಮಖಂಡಿ ಬಿಟ್ಟರೆ ವಿಜಯಪುರದಲ್ಲಿ ಇವರೊಬ್ಬರೇ ಈ ತಳಿ ಸಾಕುತ್ತಿರುವುದು. ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ 5 ಲೀಟರ್ ಹಾಲು ಕೊಡುವ ಈ ಆಕಳು ಆಕರ್ಷಕವಾಗಿವೆ. ಆಕಳಿಗೆ 1.5 ಲಕ್ಷ ರೂ. ಹಾಗೂ ಹೋರಿಗೆ 2 ಲಕ್ಷ ರೂ. ದರ ನಿಗದಿ ಮಾಡಲಾಗಿದೆ.

ನಾಲ್ಕು ಹಲ್ಲಿನ ಹೋರಿಗೆ 4 ಲಕ್ಷ ರೂ.
ಕಿಲಾರಿ ತಳಿಯ ಬೀಜದ ಹೋರಿಯೊಂದಕ್ಕೆ ಕನಿಷ್ಠ 4 ಲಕ್ಷ ರೂ. ದರ ನಿಗದಿಗೊಳಿಸಲಾಗಿದೆ. ಬಬಲೇಶ್ವರದ ರೈತ ರಾಜುಗೌಡ ಬಿರಾದಾರ ಅವರ ನಾಲ್ಕು ಹಲ್ಲಿನ ಹೋರಿಗೆ 3.50 ಲಕ್ಷ ರೂ.ಗೆ ಬೇಡಿಕೆ ಬಂದರೂ ಮಾರಿಲ್ಲ. ಮೂರೂವರೆ ವರ್ಷದ ಈ ಕಿಲಾರಿ ತಳಿ ಹೋರಿಯ ದೈನಂದಿನ ನಿರ್ವಹಣೆಗೆ ಕನಿಷ್ಠ 1000 ರೂ. ಬೇಕು. ಗೋಧಿ, ಜವೆ, ಕುಸುಬೆ ಎಣ್ಣೆ, ಕಾಟ್ಯಾಳ… ಹೀಗೆ ಗುಣಮಟ್ಟದ ಆಹಾರ ಬೇಕೇ ಬೇಕು. ಒಂದು ಬಾರಿ ಕ್ರಾಸಿಂಗ್ ಮಾಡಿಸಲು 1000 ರೂ. ನಿಗದಿ ಪಡಿಸಲಾಗಿದ್ದು ವರ್ಷಕ್ಕೆ 5 ಲಕ್ಷ ರೂ. ಆದಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ರಾಜುಗೌಡ.

ಫ್ರೆಶ್ ನ್ಯೂಸ್

Latest Posts

Featured Videos