ಚಿಕ್ಕ ಮಗುವಿನಲ್ಲೂ ಕೊರೊನಾ ಸೋಂಕು

ಚಿಕ್ಕ ಮಗುವಿನಲ್ಲೂ ಕೊರೊನಾ ಸೋಂಕು

ಬೆಂಗಳೂರು, ಮಾ. 27: ಕೊರೊನ ಎಂಬ ಮಹಾಮಾರಿ ಕಾಯಿಲೆಯು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಸಹ ರಾಜ್ಯದಲ್ಲಿ 7 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ರಾಜ್ಯದ ಜನರಲ್ಲಿ ಭಯ ಹೆಚ್ಚಾಗಿದೆ.

ಇಂದು ಮತ್ತೆ 7 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.

7 ಹೊಸ ಕೊರೋನಾ ಸೋಂಕಿತ ಪ್ರಕರಣಗಳಲ್ಲಿ ನಾಲ್ವರು ರಾಜಧಾನಿ ಬೆಂಗಳೂರಿನವರಾಗಿದ್ದಾರೆ. ಇನ್ನು 10 ತಿಂಗಳ ಮಗುವಿಗೆ ಕೂಡ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ 10 ತಿಂಗಳ ಗಂಡುಮಗುವನ್ನು ಕೆಲವು ದಿನಗಳ ಹಿಂದೆ ಪೋಷಕರು ಕೇರಳಕ್ಕೆ ಕರೆದುಕೊಂಡು ಹೋಗಿದ್ದರು. ಕೇರಳದಿಂದಲೇ ಮಗುವಿಗೆ ಸೋಂಕು ತಗುಲಿರಬಹುದೇ ಎಂಬುದು ತಿಳಿದುಬಂದಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos