ಕರೋನಾಗೆ ಎದೆಗುಂದದ ಚೀನಾ

ಕರೋನಾಗೆ ಎದೆಗುಂದದ ಚೀನಾ

ಚಿನಾ, ಫೆ.1 : ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಕರೊನಾ ವೈರಸ್ ಚೀನಾದಲ್ಲಿ 200ಕ್ಕೂ ಅಧಿಕ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಸಾವಿರಾರು ಮಂದಿ ಕರೊನಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹೋರಾಟದ ಕಿಚ್ಚು ಪ್ರದರ್ಶಿಸಿದ್ದಾರೆ. 50 ಮಿಲಿಯನ್ ಜನಸಂಖ್ಯೆ ಇರುವ ಈ ನಗರದಿಂದ ಬಸ್, ರೈಲು, ವಿಮಾನ ಸೇವೆಯನ್ನು ಬಂದ್ ಮಾಡಲಾಗಿದೆ.
ತಮ್ಮ ತಮ್ಮ ಅಪಾರ್ಟ್ಮೆಂಟ್ ಗಳಲ್ಲಿ ಬಂಧಿಗಳಾಗಿರುವ ಚೀನಿಯರು ಮಾತ್ರ ಧೈರ್ಯ ಕಳೆದುಕೊಂಡಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ” “ಗಟ್ಟಿಯಾಗಿ ನಿಲ್ಲೋಣ ವುಹಾನ್” ಎಂಬ ಘೋಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಬ್ಬರಿಗೊಬ್ಬರು ಧೈರ್ಯ ತುಂಬುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಸಿಜಿಟಿಎನ್ ಎಂಬ ಯೂಟ್ಯೂಬ್ ನಲ್ಲಿ ವುಹಾನ್ ನಾಗರಿಕರು ರಾಷ್ಟ್ರಗೀತೆ ಹಾಡುವ ದೃಶ್ಯಗಳು ಎಲ್ಲೆಡೆ ಹರಡಿವೆ. ಒಟ್ಟಾರೆ ಕೊರೊನಾ ವೈರಸ್ ನಿಂದ ಕಂಗಾಲಾಗಿರುವ ಚೀನಾದಲ್ಲಿ ನಾಗರಿಕರು ತೋರುತ್ತಿರುವ ಇಚ್ಛಾಶಕ್ತಿಗೆ ಅಧ್ಯಕ್ಷರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos