ಕೊರೊನಾ ಭೀತಿ: 3 ತಿಂಗಳ ಮುಂಗಡ ರೇಷನ್ ಹಂಚಿಕೆ

ಕೊರೊನಾ ಭೀತಿ: 3 ತಿಂಗಳ ಮುಂಗಡ ರೇಷನ್ ಹಂಚಿಕೆ

ನವದೆಹಲಿ, ಮಾ. 25: 21 ದಿನಗಳ ಕಾಲ ಅಂದರೇ ಏ. 14ರ ವರೆಗೆ ಮನೆಯಿಂದ ಹೊರಬಾರದಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ದೇಶಾದ್ಯಂತ ಕೊರೊನಾ ಸೋಂಕು ಮತ್ತಷ್ಟು ಜನರಿಗೆ ತಗುಲದಂತೆ ಮುಂಜಾಗ್ರತಾ ಕ್ರಮವಾಗಿ ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಹೀಗಾಗಿ ಜನರಿಗೆ ದೇಶಾದ್ಯಂತ ಸಬ್ಸಿಡಿ ದರದಲ್ಲಿ ರೇಷನ್ ನೀಡುವುದು, 3 ತಿಂಗಳ ರೇಷನ್ ಮುಂಗಡಲಾಗಿಯೇ ನೀಡುವಂತ ಮಹತ್ವದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಗುತ್ತಿಗೆ ಕಾರ್ಮಿಕರಿಗೂ ಸಂಬಳ ಕಡಿತ ಮಾಡುವುದಿಲ್ಲ. ಗುತ್ತಿಗೆ ಕಾರ್ಮಿಕರಿಗೂ ಸಂಬಳ ಕಡ್ಡಾಯವಾಗಿ ನೀಡಲಾಗುತ್ತದೆ. ಲಾಕ್ ಡೌನ್ ಅಂತ ಸಂಬಳ ಕಟ್ ಮಾಡುವಂತಿಲ್ಲ. ಯಾರ ವೇತನವನ್ನೂ ಕಡಿತ ಮಾಡಬೇಡಿ ಎಂಬುದಾಗಿ ಸೂಚಿಸಿದರು.

ಇನ್ನೂ ದೇಶಾದ್ಯಂತ ಸಬ್ಸಿಡಿ ದರದಲ್ಲಿ ರೇಷನ್ ನೀಡಲಾಗುತ್ತದೆ. 80 ಕೋಟಿ ಜನತೆಗೆ ಪಡಿತರ ಯೋಜನೆ ಘೋಷಿಸಲಾಗಿದೆ. ರೇಷನ್ ಕಾರ್ಡ್ ಇರುವವರಿಗೆ ಸ್ಕೀಮ್ ಅನ್ವಯವಾಗಲಿದೆ. ಮುಂಗಡ ರೇಷನ್ ಹಂಚಿಕೆ ಮಾಡಲಾಗುತ್ತಿದೆ. 3 ತಿಂಗಳಿನ ರೇಷನ್ ಮುಂಗಡ ಹಂಚಿಕೆ ಮಾಡುತ್ತಿದ್ದೇವೆ. ಲಾಕ್ ಡೌನ್ ಹಿನ್ನಲೆಯಲ್ಲಿ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದಾಗಿ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos