ಜಾನಪದ ಕಾಶಿಗೂ ಕೊರೋನಾ ಕಾಟ

ಜಾನಪದ ಕಾಶಿಗೂ ಕೊರೋನಾ ಕಾಟ

ರಾಮನಗರ: ಕಲೆ, ಸಂಸ್ಕೃತಿ ಮತ್ತು ವಿಶಿಷ್ಟ ಆಚರಣೆಗಳನ್ನು ನಾಡಿಗೆ ಪರಿಚಯಿಸುವಲ್ಲಿ ಹೆಸರಾಗಿರುವ, ಜನಪದ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ರಾಮನಗರದ ಜಾನಪದ ಲೋಕದಲ್ಲಿ ನಾಡಹಬ್ಬ ದಸರಾ ಹಬ್ಬವನ್ನು ಬನ್ನಿ ಮುರಿಯುವ ಮೂಲಕ ಸರಳವಾಗಿ ಆಚರಿಸಲಾಯಿತು. ಈ ಬಾರಿ ಕೋವಿಡ್-೧೯ ಹಿನ್ನೆಲೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಯಿತು. ಆದರೆ ಜಾನಪದ ಲೋಕದಲ್ಲಿ ವರ್ಷವಿಡಿ ದಸರಾ ಬೊಂಬೆ ಪ್ರದರ್ಶನವು ನಡೆಯುತ್ತದೆ.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಟಿ.ತಿಮ್ಮೇಗೌಡ, ಅಧಿಕಾರಿಗಳು ಸಂಪ್ರದಾಯದಂತೆ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬಾಳೆಕಂದು ಕತ್ತರಿಸುವ ಮೂಲಕ ಸರಳ ದಸರಾಗೆ ಚಾಲನೆ ನೀಡಿದರು. ನಾಡ ದೇವತೆ ಚಾಮುಂಡೇಶ್ವರಿ ತಾಯಿಗೆ ಹಾಗೂ ಆಯುಧಗಳಿಗೆ ಪೂಜೆ ಸಲ್ಲಿಸಿ, ಬನ್ನಿ ಮುರಿದು ಪ್ರವಾಸಿಗರು, ಜಾನಪದ ಲೋಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಭಾಶಯ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ತಿಮ್ಮೇಗೌಡರು ಮಾತನಾಡಿ ರಾಜ್ಯದಲ್ಲಿ ಪ್ರತಿವರ್ಷ ವಿಜಯದಶಮಿ ಅಂದರೆ ವಿಶೇಷ. ಅದರಲ್ಲೂ ಮೈಸೂರು ದಸರಾ ಅಂದರೆ ವಿಶ್ವದಿಂದ ಜನ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತಿದ್ದರು. ಆದರೆ ಈ ಬಾರಿ ಕೊರೋನಾಯಿಂದಾಗಿ ಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಸರಳವಾಗಿ ದಸರಾ ಆಚರಣೆ ಮಾಡಲಾಗಿದೆ. ಈ ಹಿನ್ನೆಲೆ ಜಾನಪದ ಲೋಕದಲ್ಲೂ ಸಹ ಸರಳವಾಗಿ ಆಚರಣೆ ಮಾಡಿದ್ದೇವೆಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos