ಕೊರೊನಾ ಭೀತಿ: ಉಚಿತವಾಗಿ ಕೋಳಿಗಳ ಹಂಚಿಕೆ

ಕೊರೊನಾ ಭೀತಿ: ಉಚಿತವಾಗಿ ಕೋಳಿಗಳ ಹಂಚಿಕೆ

ಚಿಕ್ಕೋಡಿ, ಮಾ. 16:  ಕೊರೊನಾ ವೈರಸ್ ಭೀತಿಯಿಂದ ಕೋಳಿ ವ್ಯಾಪಾರ ನೆಲಕಚ್ಚಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ರಾತ್ರಿ ಉಚಿತವಾಗಿ ಕೋಳಿಗಳ ಹಂಚಿಕೆ ಮಾಡಲಾಗಿದೆ.

ಕೋಳಿಗಳ ಜೀವಂತ ಸಮಾಧಿ ಬಳಿಕ ಈಗ ಫಾರಂ ಮಾಲೀಕರು ಚಿಕನ್ ಪ್ರಿಯರಿಗೆ ಉಚಿತವಾಗಿ ಕೋಳಿಗಳನ್ನು ಹಂಚಿಕೆ ಮಾಡಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ವಿವಿಧ ಕಾಲೋನಿಗಳಲ್ಲಿ ಲಾರಿಗಳಲ್ಲಿ ಕೋಳಿ ತಂದು ಜನರಿಗೆ ಉಚಿತವಾಗಿ ನೀಡಲಾಗಿದೆ. ಕೊರೊನಾ ಭೀತಿ ನಡುವೆಯೂ ಉಚಿತ ಕೋಳಿ ತೆಗೆದುಕೊಂಡು ಹೋಗಲು ಜನ ಗುಳೆ ಬಿದ್ದಿದ್ದರು.

ಒಬ್ಬರು ಎರಡು ಮೂರು ಕೋಳಿಗಳನ್ನ ಪಡೆದುಕೊಂಡು ಹೋಗಿದ್ದಾರೆ. ಇತ್ತ ಚಿಕನ್ ತಿಂದರೆ ಕೊರೊನಾ ಹರಡುತ್ತೆ ಎನ್ನುವ ಭೀತಿಯಲ್ಲಿದ್ದವರು ಉಚಿತ ಕೋಳಿಗಳನ್ನ ನೀಡುವುದನ್ನ ನೋಡುತ್ತಾ ನಿಂತುಕೊಂಡಿದ್ದರು. ಚಿಕನ್ ತಿಂದರೆ ಕೊರೊನಾ ಬರುತ್ತದೆ ಎಂಬ ಸುಳ್ಳು ಸುದ್ದಿಯಿಂದ ಇಡಿ ಕುಕ್ಕುಟ ಉದ್ಯಮ ನೆಲೆಕಚ್ಚಿದೆ. ಹೀಗಾಗಿ ಈ ಉದ್ಯಮವನ್ನ ನಂಬಿದವರಿಗೆ ತುಂಬಾ ನಷ್ಟವಾಗಿದ.

 

ಫ್ರೆಶ್ ನ್ಯೂಸ್

Latest Posts

Featured Videos