ಹೈನುಗಾರಿಕೆಗೂ ಕೊರೋನಾ ಕರಿ ನೆರಳು

  • In State
  • August 19, 2020
  • 161 Views
ಹೈನುಗಾರಿಕೆಗೂ ಕೊರೋನಾ ಕರಿ ನೆರಳು

ತಿಪಟೂರು :ಹೈನುಗಾರಿಕೆ ಮೇಲೂ ಕೊರೋನಾ ಕರಿನೆರಳು ಬಿದ್ದಿದ್ದು, ನಷ್ಟ ಭರಿಸಲಾಗದೆ ಹೈರಾಣಾಗಿರುವ ತುಮಕೂರು ಹಾಲು ಒಕ್ಕೂಟ (ತುಮುಲ್) ಆ.೧೬ರಿಂದ ರೈತರಿಂದ ಖರೀದಿಸುವ ಪ್ರತೀ ಲೀಟರ್ ಹಾಲಿಗೆ ಮತ್ತೆ ೨ ರೂ., ಕಡಿತಗೊಳಿಸಿದೆ.
ಹೈನುಗಾರಿಕೆ ನಂಬಿ ಸಂಸಾರದ ನೊಗ ತೂಗಿಸುತ್ತಿರುವ ಕುಟುಂಬಗಳಿಗೆ ಕರೊನಾ ಭೀತಿ ಕಾಣಿಸಿಕೊಂಡ ಮಾರ್ಚ್ನಿಂದ ಆಗಸ್ಟ್ವರೆಗೂ ಹಾಲು ಖರೀದಿ ಬೆಲೆಯನ್ನು ಮೂರು ಬಾರಿ ಕಡಿತಗೊಳಿಸಿದೆ. ಫೆಬ್ರವರಿಯಲ್ಲಿ ಪ್ರತೀ ಲೀಟರ್ ಹಾಲಿಗೆ ೨೮.೫೦ ರೂ., ನೀಡುತ್ತಿದ್ದ ತುಮುಲ್ ಮಾರ್ಚ್ನಲ್ಲಿ ೧ ರೂ., ಇಳಿಕೆ ಮಾಡಿತು. ಏಪ್ರಿಲ್-ಮೇ ತಿಂಗಳಲ್ಲಿ ಮತ್ತೊಮ್ಮೆ ೨.೫೦ ರೂ. ಕಡಿತಗೊಳಿಸಿತು. ಆದರೂ, ನಷ್ಟ ಭರಿಸಲಾಗದೆ ಮತ್ತೆ ಆ.೧೬ರಿಂದ ೨ ರೂ., ಕಡಿಮೆ ಮಾಡಿದೆ.
೫.೫೦ ರೂ., ಕಡಿತ
ಕೊರೋನಾ ಕಾಲಿಟ್ಟ ನಂತರ ಈವರೆಗೆ ಹಂತ ಹಂತವಾಗಿ ಹಾಲಿನ ಖರೀದಿ ಬೆಲೆಯಲ್ಲಿ ಒಟ್ಟಾರೆ ೫.೫೦ ರೂ. ಇಳಿಕೆಯಾಗಿದ್ದು, ಫೆಬ್ರವರಿಯಲ್ಲಿ ಲೀಟರ್‌ಗೆ ೨೮.೫೦ ರೂ ಇದ್ದ ಹಾಲಿನ ಬೆಲೆ ಈಗ ೨೩ ರೂ.,ಗೆ ಇಳಿದಿದೆ. ಬೇರೆ ಹಾಲು ಒಕ್ಕೂಟಗಳು ವಾರದ ಒಂದು ದಿನ ರಜೆ ಘೋಷಿಸಿದ್ದವು. ಆದರೆ, ತುಮುಲ್ ರಜೆ ಘೋಷಿಸದೆ ಹಾಲು ಖರೀದಿಸಿದೆ.
ಸದ್ಯಕ್ಕೆ ತುಮುಲ್‌ಗೆ ಪ್ರತಿನಿತ್ಯ ೮.೫೪ ಲಕ್ಷ ಲೀಟರ್ ಹಾಲು ಹರಿದುಬರುತ್ತಿದೆ. ಕರೊನಾಕ್ಕೆ ಮುಂಚೆ ೨ ಲಕ್ಷ ಲೀಟರ್ ಮುಂಬೈಗೆ ರವಾನೆ ಮಾಡಲಾಗುತ್ತಿತ್ತು. ಈಗ ೫೦ ಸಾವಿರ ಲೀಟರ್‌ಗೆ ಕುಸಿದಿದೆ. ಬೆಂಗಳೂರಿಗೆ ೧.೬೫ ಲಕ್ಷ ಲೀ., ಪೂರೈಸುತ್ತಿದ್ದು ೧.೫ ಲಕ್ಷ ಲೀ.,ಗೆ ತುಮಕೂರಿಗೆ ೧.೧೫ ಲಕ್ಷ ಲೀ.,ನಲ್ಲಿ ೧ ಲಕ್ಷ ಲೀಟರ್‌ಗೆ ಇಳಿಕೆಯಾಗಿದೆ. ಹಾಗಾಗಿ, ಹಾಲು ಮಾರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಉಳಿದ ಹಾಲನ್ನು ಪುಡಿ, ಬೆಣ್ಣೆ ತಯಾರಿಕೆಗೆ ಬಳಸಲಾಗುತ್ತಿದೆ. ಮಾರ್ಚ್ ನಿಂದ ಆಗಸ್ಟ್ವರೆಗೆ ತುಮಕೂರು ಹಾಲು ಒಕ್ಕೂಟವೊಂದೇ ಅಂದಾಜು ೨೩ ಕೋಟಿ ನಷ್ಟ ಅನುಭವಿಸಿದ್ದು ದರ ಕಡಿತ ಅನಿವಾರ್ಯವೆನಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos