ಕೋರ: ಸತತವಾಗಿ 3ನೇ ಬಾರಿ ವೈಯಕ್ತಿಕ ಚಾಂಪಿಯನ್

ಕೋರ: ಸತತವಾಗಿ 3ನೇ ಬಾರಿ ವೈಯಕ್ತಿಕ ಚಾಂಪಿಯನ್

ತುಮಕುರು, ಆ. 30: ಪ್ರಾಥಮಿಕ ಶಾಲೆಲ್ಲಿರುವ ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದಹಾಗೆ. ಆ ಬಿಳಿ ಹಾಳೆಯಲ್ಲಿ ನಾವು ಏನೇ ಬರೆದರು ಬರೆವುತ್ತದೆ. ಹೌದು, ಕೋರ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾ ಕೂಟ ಕೆಸ್ತೂರು ಗ್ರಾಮದಲ್ಲಿ ನಡೆದ  ಸತತವಾಗಿ ಮೂರನೇಬಾರಿ ವೈಯಕ್ತಿಕ ಚಾಂಪಿಯನ್ ಮತ್ತು  ಶಾಲಾ ಸಮಗ್ರ ಪ್ರಶಸ್ತಿಯನ್ನು G.M.H.P.S ಕೋರ  ಶಾಲೆಯ ವಿದ್ಯಾರ್ಥಿಗಳು ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿಯಲ್ಲಿ  ಪ್ರಥಮ ಸ್ಥಾನ, ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ, ಬಾಲಕರ ಥ್ರೋಬಾಲ್ ನಲ್ಲಿ ದ್ವಿತೀಯ ಸ್ಥಾನ ಮತ್ತು ಬಾಲಕಿಯರ ಖೋ-ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಶಾಲೆಯ ಮುಖ್ಯೋಶಿಕ್ಷಕರಾದ ಶ್ರೀ ವೆಂಕಟರಾಮಯ್ಯ ನವರು  ಹಾಗೂ ಧೈಹಿಕ ಶಿಕ್ಷಕರಾದ ಶ್ರೀಮತಿ ಸುಮಿತ್ರಾ ರವರು ಹಾಗೂ ಸಹ ಶಿಕ್ಷಕರು ಉಪಸ್ಥಿತರಿದ್ದರು

ಫ್ರೆಶ್ ನ್ಯೂಸ್

Latest Posts

Featured Videos