ಚನ್ನಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಅಗತ್ಯ ಕ್ರಮ: ಡಿಕೆಶಿ

ಚನ್ನಪಟ್ಟಣದಲ್ಲಿ ಗುರುಭವನ ನಿರ್ಮಾಣಕ್ಕೆ ಅಗತ್ಯ ಕ್ರಮ: ಡಿಕೆಶಿ

ರಾಮನಗರ: ಸಮಾಜದ ಆಧಾರ ಸ್ತಂಭವಾಗಿರುವ ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು, ರಾಜ್ಯದಲ್ಲಿ ವರ್ಷಕ್ಕೆ ಹತ್ತು ಸಾವಿರ ಕೋಟಿ ರೂ.ಗಳ ಸಿಎಸ್‌ಆರ್ ನಿಧಿ ಸಂಗ್ರಹವಾಗುತ್ತದೆ, ಆ ನಿಧಿಯನ್ನು ಶಿಕ್ಷಣ ಕ್ಷೇತ್ರಕ್ಕೆ ಸದ್ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ, ಈ ದಿಸೆಯಲ್ಲಿ ಮುಖ್ಯಮಂತ್ರಿಯವರಿಗೆ ಗಮನಕ್ಕೆ ತಂದು ಒಂದು ಸಮಿತಿ ರಚಿಸಲಾಗಿದೆ ಎಂದು ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಅವರು (ಸೆ.30ರ ಸೋಮವಾರ) ರಂದು ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಮನಗರ ಜಿಲ್ಲಾ ಹಾಗೂ ಚನ್ನಪಟ್ಟಣ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸತ್ಪ್ರಜೆಗಳನ್ನು   ನಿರ್ಮಿಸುವುದರಲ್ಲಿ ಶಿಕ್ಷರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಅವರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವ ಗುರುಭವನವನ್ನು ಚನ್ನಪಟ್ಟಣ ತಾಲ್ಲೂಕಿನಲ್ಲಿ ನಿರ್ಮಿಸಲು ಸರ್ಕಾರ ಸಿದ್ಧವಿದ್ದು, ಅಗತ್ಯ ರೂಪುರೇಷುಗಳನ್ನು ಸಿದ್ದ ಮಾಡಿಕೊಳ್ಳುವಂತೆ ಹೇಳಿದರು.

ಚನ್ನಪಟ್ಟಣ ತಾಲ್ಲೂಕಿಗೆ ಅಗತ್ಯವಿರುವ ಗುರುಭವವನ್ನು ನಿರ್ಮಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಡಿಡಿಪಿಐ ಅಗತ್ಯ ಸ್ಥಳವನ್ನು ಪರಿಶೀಲಿಸಿ, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನದ ವರದಿ ಸಿದ್ಧಪಡಿಸಿ ಕೊಟ್ಟಲ್ಲಿ ಗುರು ಭವನ ನಿರ್ಮಾಣಕ್ಕೆ ಸರ್ಕಾರದಿಂದ ಕ್ರಮ ವಹಿಸಲಾಗುವುದು. ಆ ಮೂಲಕ ಶಿಕ್ಷಕರ ಅಗತ್ಯ ಚಟುವಟಿಕೆಗಳನ್ನು ಅಲ್ಲಿ ಹಮ್ಮಿಕೊಳ್ಳಲು ಸಾಧ್ಯವಾಗಲಿದೆ ಎಂದವರು ಹೇಳಿದರು. ಇದನ್ನೂ ಓದಿ: ಹೆಚ್‌ ಡಿಕೆ ಅವರಿಗೆ ಸಿಕ್ಕಿರುವ ಒಳ್ಳೇ ಅವಕಾಶ ಬಳಸಿಕೊಳ್ಳಲಿ: ಡಿಸಿಎಂ

ಸಮಿತಿಯಲ್ಲಿ ಐಟಿಬಿಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಸದಸ್ಯರಾಗಿರುತ್ತಾರೆ. 3 ರಿಂದ 4 ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಬ್ಲಿಕ್ ಶಾಲೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ, ಈ ಶಾಲೆಗಳನ್ನು ಖಾಸಗಿಯಿಂದ ನಿಭಾಯಿಸಲಾಗುವುದು, ಈ ಮೂಲಕ ಶಿಕ್ಷಕರ ಕೊರತೆಯನ್ನು ನೀಗಿಸಸಲಾಘುವುದು ಎಂದರು.

ಸಮಾಜದ ಯಾವುದೇ ವೃತ್ತಿ ಶಿಕ್ಷಕ ವೃತ್ತಿಗೆ ಪರ್ಯಾಯವಲ್ಲ. ಶಿಕ್ಷಕರಿಗೆ ನೀಡುವ ಗೌರವ ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸುವ ನಿಮ್ಮ ಶ್ರಮಕ್ಕೆ ತಕ್ಕ ಫಲವಿದೆ. ಹೃದಯವಂತಿಕೆ ಬಳಸಿಕೊಂಡು ಕೆಲಸ ಮಾಡಬೇಕು ಎಂದರು.

ಚನ್ನಪಟ್ಟಣದಲ್ಲಿ ಸಾಕಷ್ಟು ಶಿಕ್ಷಕರಿಗೆ ನಿವೇಶನ ಹಾಗೂ ಮನೆಗಳಿರುವುದಿಲ್ಲ. ಇದನ್ನು ಗಮನಿಸಿರುವ ಸರ್ಕಾರ ಮುಂಬರುವ ದಿನಗಳಲ್ಲಿ ನಿವೇಶನಗಳನ್ನು ನೀಡಲು ಚಿಂತಿಸಿದ್ದು, ಶಿಕ್ಷಕರಿಗಾಗಿಯೇ ಪ್ರತ್ಯೇಕ ಬಡಾವಣೆಯೊಂದನ್ನು ನಿರ್ಮಿಸಲು ಜಮೀನನ್ನು ಗುರುತಿಸಲಾಗುವುದು. ಇದಕ್ಕಾಗಿ ಪ್ರತ್ಯೇಕವಾಗಿ ಒಂದು ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos