ಅಭಿನಂದನಾ ಕಾರ್ಯಕ್ರಮ

  • In State
  • February 22, 2021
  • 60 Views
ಅಭಿನಂದನಾ ಕಾರ್ಯಕ್ರಮ

ಪೀಣ್ಯ: ಜಾಲಹಳ್ಳಿಯ ಸೈಂಟ್ ಕ್ಲಾರೆಟ್ ಕಾಲೇಜು ಆಡಳಿತ ಮಂಡಳಿಯ ವಿವಿಧ ಭಾಗಗಳಿಂದ ಪಿಎಚ್ ಡಿ ಪದವಿ ಪುರಸ್ಕೃತರಾದವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಪಿ.ಎಚ್. ಡಿ ಪದವಿ ಪಡೆದ ಡಾ.ಎನ್. ಮಾದೇಶ್, ಡಾ. ಶಫೀರ್ ಪಾಷ ,ಡಾ. ಜಾಮಿರ್ ಪಾಷಾ,ಡಾ. ರಶ್ಮಿಕಾ ಎಚ್, ಡಾ. ಡಿ.ವಿ. ವಿದ್ಯಾಶ್ರೀ, ಡಾ. ಜ್ಯೋತಿ, ಡಾ. ಸಿದ್ದಲಿಂಗಪ್ಪ ಎಸ್ ದೇಶ್ ಮುಖ್, ಡಾ.ಮುನಿರಾಜು ಇವರುಗಳನ್ನು ಅಭಿನಂದಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ರೆ.ಫಾ. ಡಾ. ಥಾಮಸ್ ತೆನಿಡಿಯಾಲ್ ಮಾತನಾಡಿ ಪಿ.ಎಚ್.ಡಿ. ಪದವಿಯು ಉನ್ನತ ಶಿಕ್ಷಣ ವಾಗಿದ್ದು ಇಂದಿನ ಹೊಸ ಶಿಕ್ಷಣ ನೀತಿಯ ಸಂದರ್ಭದಲ್ಲಿ ಹೆಚ್ಚು ಪಿ.ಎಚ್.ಡಿ.ಪದವಿಗಳಿಸಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹ ಹಾಗೂ ಸ್ಫೂರ್ತಿಯನ್ನು ತರಬೇಕೆಂದು ಹೇಳಿದರು.
ಉಪ ಪ್ರಾಂಶುಪಾಲರಾದ ರೆ. ಫಾದರ್ ಅಬ್ರಹಮ್ ಪಿ.ಜೆ, ವಿದ್ಯಾರ್ಥಿಗಳು ಎಲ್ಲಾ ವಿಭಾಗಗಳ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos