ಹಾಸ್ಯ ನಟ ರಾಜ್ ಗೋಪಾಲ್ ವಿಧಿವಶ

ಹಾಸ್ಯ ನಟ ರಾಜ್ ಗೋಪಾಲ್ ವಿಧಿವಶ

ಬೆಂಗಳೂರು.ಜು.2 :  ಸಿನಿಮಾಗಳಲ್ಲಿ ನಟಿಸಿ, ಅಭಿಮಾನಿಗಳಿಗೆ ಹಾಸ್ಯದೂಟ  ಬಡಿಸಿದ್ದ  ನಟ ಮಿಮಿಕ್ರಿ ರಾಜ್ ಗೋಪಾಲ್

ಗುರುವಾರ  ವಿಧಿವಶರಾಗಿದ್ದಾರೆ. ಅವರಿಗೆ 69 ವಯಸ್ಸಾಗಿತ್ತು.  ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದರು. ನಟ ಮಿಮಿಕ್ರಿ ರಾಜಗೋಪಾಲ್  ಬೆಂಗಳೂರಿನ ಕೆಂಗೇರಿಯ ಅವರ ಮನೆಯಲ್ಲಿ ವಿಧಿವಶರಾಗಿದ್ದಾರೆ. ಕನ್ನಡ ಭಾಷೆಗಳಲ್ಲಿ ಹಾಸ್ಯನಟ, ಪೋಷಕ ನಟನಾಗಿ ಅಭಿನಯಿಸಿದ್ದರು. ಕನ್ನಡ , ತಮಿಳು ಸೇರಿದಂತೆ 650 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಇಂದು ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ರಾಜ್ ಗೋಪಾಲ್‌ಗೆ ಮೂರು ಜನ ಹೆಣ್ಣುಮಕ್ಕಳಿದ್ದಾರೆ. ವರನಟ ಡಾ. ರಾಜ್ ಕುಮಾರ್ ಕೂಡ ರಾಜಗೋಪಾಲ್ ಮಿಮಿಕ್ರಿ ಯನ್ನ ಮೆಚ್ಚಿ ಹೊಗಳಿದ್ದರು.  ಆಕ್ರೇಸ್ಟ್ರಾಗಳಲ್ಲಿ ಮಿಮಿಕ್ರಿ ಮಾಡಿ ಹೆಸರು ಮಾಡಿದ್ದ ರಾಜ್ ಗೋಪಾಲ್ ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಹೀಗೆ ಕನ್ನಡ ದೊಡ್ಡ ನಟರ ಜೊತೆ ಅಭಿನಯಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos