ನೀರು ಹರಿಸುವ ವಾರ ಬಂದಿ ಕೈ ಬಿಡಲು ಒತ್ತಾಯ

ನೀರು ಹರಿಸುವ ವಾರ ಬಂದಿ ಕೈ ಬಿಡಲು ಒತ್ತಾಯ

ಹುಣಸಗಿ: ತಾಲೂಕಿನ ನಾರಾಯಣಪೂರ ಬಸವಸಾಗರದಿಂದ ಕಾಲುವೆಗೆ ನಿರಂತರವಾಗಿ ನೀರು ಹರಿಸುವುದನ್ನು ನಿಲ್ಲಿಸಿ ವಾರ ಬಂದಿ ಮಾಡಿರುವುದನ್ನು ನಿಲ್ಲಿಸಿ ತಕ್ಷಣವೇ ಕಾಲುವೆಗಳಿಗೆ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ತಾಲ್ಲೂಕ್ ಸಮಿತಿ ಸುರಪುರ ಸದಸ್ಯರು, ನಾರಾಯಣಪೂರ ಇಂಜಿನಿಯರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಜಿಲ್ಲಾ ಸಮಿತಿಯ ಸಂಚಾಲಕ ಶಿವಲಿಂಗ ಹಸನಾಪೂರ ಮಾತನಾಡಿ, ನಾರಾಯಣಪೂರ ಬಸವಸಾಗರ ಜಲಾಶಯವು ಭರ್ತಿಯಾಗಿದ್ದು, ನೀರಿನ ಕೊರತೆ ಇಲ್ಲದೆ ಇದ್ದರು ವಾರ ಬಂದಿ ಮೂಲಕ ಕಾಲುವೆಗೆ ನೀರು ಹರಿಸಿ ರೈತರ ಜೀವನದ ಜೊತೆ ಜಲ್ಲಾಟವಾಡುತ್ತಿರುವುದನ್ನು ಖಂಡಿಸುತ್ತದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಜಲಾಶಯ ಭರ್ತಿಯಾಗಿದೆ. ಕಾಲುವೆಗೆ ವಾರಬಂದಿ ಮಾಡುವ ಪದ್ಧತಿಯನ್ನು ಕೈ ಬಿಟ್ಟು, ನಿರಂತರವಾಗಿ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ದೇಶಾದ್ಯಂತ ಕಣ್ಣಿಗೆ ಕಾಣದಂತೆ ಜನಸಾಮಾನ್ಯರ ಜೀವದ ಜೊತೆ ಚಲ್ಲಾಟವಾಡುತ್ತಿರುವ ಕೊರೋನಾದಿಂದ ರೈತರು ತತ್ತರಿಸಿ ಹೋಗಿದ್ದು, ಬೆಳೆದ ಬೆಳೆಗೆ ನಿಗದಿತ ಬೆಲೆ ಸಿಗದೆ ಅದೇಷ್ಟೋ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಳೆದ ಬೆಳೆಗೆ ನೀರು ಹರಿಸಿದರೆ ಇನ್ನಷ್ಟು ಬೆಳೆಗಳು ಹಾಳಾಗಿ ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ. ವಾರಬಂದಿ ಕಾಲುವೆ ನೀರು ಹರಿಸುವುದನ್ನು ನಿಲ್ಲಿಸಿ, ಕಾಲುವೆಗೆ ನೀರು ಹರಿಸಲು ಕ್ರಮಕೈಗೊಳ್ಳಬೇಕು, ನಿಷ್ಕಾಳಜಿ ವಹಿಸಿದರೆ ತಮ್ಮ ಕಾರ್ಯಾಲಯಕ್ಕೆ ಬೀಗ ಮುದ್ರೆ ಹಾಕಿ ಪ್ರತಿಭಟಿಸಲಾಗುತ್ತದೆ ಎಂದು ಆಕ್ರೋಶಗೊಂಡರು.

ಈ ಸಂದರ್ಭದಲ್ಲಿ ಖಾಜಾ ಅಜ್ಮೀರ, ಮರಲಿಂಗ ಗುಡಿಮನಿ, ಭೀಮರಾಯ, ಮೌನೇಶ ದೇವತ್ಕಲ್ ವೀರಭದ್ರ ತಳವಾರ, ತಿಪ್ಪಣ್ಣ ಶೆಳ್ಳಗಿ, ವೆಂಕಟೇಶ ದೇವಾಪೂರ, ಶೇಖರ ಮಂಗಳೂರ, ಎಂ.ಪಟೇಲ, ಚನ್ನಪ್ಪ ತಳವಾರ, ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos