ಸಿಎಂ ಯೋಗಿ ರಾಜಿನಾಮೆಗೆ ಆಗ್ರಹ

ಸಿಎಂ ಯೋಗಿ ರಾಜಿನಾಮೆಗೆ ಆಗ್ರಹ

ಕೋಲಾರ:ದಲಿತ ತರುಣಿ ಮೇಲೆ ಕ್ರೂರವಾಗಿ ಗುಂಪೊಂದು ಅತ್ಯಾಚಾರವೆಸಗಿ ನಾಲಿಗೆ ಕತ್ತರಿಸಿ ಬೆನ್ನು ಮೂಳೆ, ಕಾಲು ಮುರಿದು ವರ್ತಿಸಿರುವ ಪೈಶಾಚಿಕ ಕೃತ್ಯವನ್ನು ಖಂಡಿಸಿ ನಗರದಲ್ಲಿ ಭಾರತೀಯ ದಲಿತ ಸೇನೆ ಮತ್ತು ವಿವಿಧ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿದ ಮಹಾನ ನಾರಾಯಣಸ್ವಮಿ ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಯುವತಿ ತಮ್ಮ ಜಮೀನಿನ ಕಡೆ ಹೋಗಿದ್ದ ಸಮಯದಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಗುಂಪೊಂದು ಆಕೆಯ ಮೇಲೆ ಪಶುವಿನಂತೆ ಎರಗಿ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ.
ಅತೀ ಕ್ರೂರವಾಗಿ ಮನಿಷ ಎಂಬ ದಲಿತ ಯುವತಿಯನ್ನು ಅತ್ಯಾಚಾರಿ ಮಾಡಿ ಸಾವಿಗೆ ಕಾರಣರಾದವರನ್ನೂ ಕೂಡಲೇ ಬಂಧಿಸಿ ಅವರನ್ನು ನೇಣು ಹಾಕಬೇಕು ಮತ್ತು ಇಚಿತಹ ಕೃತ್ಯಗಳು ಉತ್ತರಪ್ರದೇಶದಲ್ಲಿ ನಡೆಯುತ್ತಲೇ ಇದ್ದರೂ ಸೂಕ್ತ ರಕ್ಷಣೆ ಒದಗಿಸದ ಸಿಎಂ ಯೋಗಿಆದಿತ್ಯನಾತ್ ಕೂಡಲೇ ರಾಜಿಮಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು .
ಪ್ರತಿಭಟನೆಯಲ್ಲಿ ಮುಖಂಡರಾದ ಖದ್ರಿಪುರ ಬಾಬು, ಸಾಹಿತಿ ಶರಣಪ್ಪ ಗಬ್ಬೂರು, ಯುವಶಕ್ತಿ ಸುಬ್ಬು, ದಿಂಬಚಾಮನಹಳ್ಳಿ ಅಂಬರೀಶ, ಮತ್ತುಕುಂಟೆ ಕೃಷ್ಣ, ಸರೋಜ, ಜಯನಗರ ರವಿ ಮುಂತಾದ ನೂರಕ್ಕೂ ಹೆಚ್ಚು ಸಂಘಟಕರು ಬಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos