ಸಿಎಂಗೆ ಎದುರಾಯಿತು ಮತ್ತೊಂದು ಸಂಕಷ್ಟ

ಸಿಎಂಗೆ ಎದುರಾಯಿತು ಮತ್ತೊಂದು ಸಂಕಷ್ಟ

ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಹ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. 3 ತಿಂಗಳಲ್ಲಿ ಅಂದರೆ ಡಿ. 24ರೊಳಗೆ ತನಿಖೆ ನಡೆಸಿ ವರದಿ ನೀಡುವಂತೆ ಮೈಸೂರು ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಇದನ್ನೂ ಓದಿ: ಬಿಬಿಎಂಪಿ ಗೇಟ್ ಬಿದ್ದು ಮೃತಪಟ್ಟ ಬಾಲಕನ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ

CRPC ಸೆಕ್ಷನ್ 156(3) ಅಡಿ ಕೇಸ್‌ ರಿಜಿಸ್ಟರ್ ಮಾಡಲು ಆದೇಶ ನೀಡಲಾಗಿದ್ದು, ತನಿಖಾ ವರದಿ ನೀಡಲು 3 ತಿಂಗಳ ಗಡುವು ನೀಡಲಾಗಿದೆ. ಅಂದ್ರೆ ಡಿಸೆಂಬರ್ 24 2024ಕ್ಕೆ ತನಿಖಾ ವರದಿ ನೀಡಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಸೂಚನೆ ನೀಡಿದೆ. ಕೋರ್ಟ್ ಆದೇಶದ ಕಾಪಿ ಲೋಕಾಯುಕ್ತ ಡಿಜಿಗೆ ತಲುಪಲಿದೆ. ಬಳಿಕ ಲೋಕಾಯುಕ್ತ ಡಿಜಿ ಮೈಸೂರಿನ ಎಸ್‌ಪಿಗೆ ನಿರ್ದೇಶನ ನೀಡಲಿದ್ದಾರೆ. ತದ ನಂತರ ಎಸ್‌ಪಿ ಲೋಕಾಯುಕ್ತ ಎಸ್​ಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್‌ ದಾಖಲಿಸಲಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos