ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ

ಬೆಂಗಳೂರು, ಜ. 17: ಪ್ರತಿವರ್ಷವು ಗಣರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರು ನಗರದಲ್ಲಿರುವ ಲಾಲ್ಬಾಗ್ ಪಾರ್ಕ್ ನಲ್ಲಿ ಹಲವಾರು ರೀತಿಯ ಪುಷ್ಪ ಪ್ರದರ್ಶನ ನಡೆಯುತ್ತದೆ. ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಲಾಲ್ ಬಾಗ್ ನಲ್ಲಿ ಪುಷ್ಪ ಪ್ರದರ್ಶನ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೆಂದರೆ ಈ ವರ್ಷ ಸ್ವಾಮಿ ವಿವೇಕಾನಂದ ಅವರ ಮೂರ್ತಿಯನ್ನು ಸ್ಥಾಪಿಸಲಾಗಿದೆ.

ಗಣರಾಜ್ಯೋತ್ಸವ ಅಂಗವಾಗಿ ಲಾಲ್ಬಾಗ್ನಲ್ಲಿ ಆಯೋಜಿಸಲಾಗಿರುವ 211ನೇ ಪುಷ್ಪ ಪ್ರದರ್ಶನವನ್ನ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು. ಈ ಫ್ಲವರ್ ಶೋವನ್ನು ಸ್ವಾಮಿ ವಿವೇಕಾನಂದರಿಗೆ ಅರ್ಪಣೆ ಮಾಡಲಾಗಿದೆ.

ಬಳಿಕ ಮಾತನಾಡಿದ ಸಿಎಂ ಯಡಿಯೂರಪ್ಪ, ಪುಷ್ಪ ಪ್ರದರ್ಶನದಲ್ಲಿ ವಿವೇಕಾನಂದರ ಜೀವನ ಪರಿಚಯಿಸೋ ವಿಶೇಷ ವ್ಯವಸ್ಥೆ ಆಗಿದೆ. ಬೆಂಗಳೂರು ಹಾಗೂ ನಾಡಿನ ಜನರು ಬಂದು ವಿವೇಕ ಪುಷ್ಪ ಪ್ರದರ್ಶನ ನೋಡ್ಬೇಕು. ಗಣರಾಜ್ಯೋತ್ಸವದವರೆಗೂ ನಡೆಯೋ ಈ ಪುಷ್ಪ ಪ್ರದರ್ಶನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರೆತಿದೆ. ಸಸ್ಯಕಾಶಿ ಲಾಲ್ ಬಾಗ್ಗೆ 250 ವರ್ಷಗಳ ಇತಿಹಾಸವಿದೆ. ವಿವೇಕಾನಂದರ 156 ನೇ ಜನ್ಮದಿನದ ಅಂಗವಾಗಿ ಪುಷ್ಪಪ್ರದರ್ಶನ ಆಯೋಜಿಸಲಾಗಿದೆ. ಅಲ್ಲದೇ 127 ವರ್ಷಗಳ ಹಿಂದಿನ ಚಿಕಾಗೋ ಸಮ್ಮೇಳನದ ನೆನಪು ಇಲ್ಲಿದೆ. ನಮ್ಮ ನಿರೀಕ್ಷೆಗೂ ಮೀರಿ ಪುಷ್ಪ ಪ್ರದರ್ಶನ ಉತ್ತಮವಾಗಿ ಮೂಡಿಬಂದಿದೆ. ಪುಷ್ಪ ಪ್ರದರ್ಶನಕ್ಕೆ ಮಕ್ಕಳಿಗೆ ಯಾವುದೇ ರೀತಿಯ ಟಿಕೆಟ್ ಚಾರ್ಜ್ ಇರೋದಿಲ್ಲ. ಈ ಅದ್ಭುತ ಪುಷ್ಪ ಪ್ರದರ್ಶನವನ್ನು ಬೆಂಗಳೂರಿನ ಜನರು ಕಣ್ತುಂಬಿಕೊಳ್ಳಬೇಕು. ವಿವೇಕಾನಂದರ ನೆನಪನ್ನು ತರಿಸುವ ವಿಶೇಷ ಕಾರ್ಯಕ್ರಮ ಇದು. ಇಲ್ಲಿಗೆ ಎಲ್ಲರು ಭೇಟಿ ನೀಡ್ಬೇಕು ಅಂತಾ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos