ದೂರು ಕೊಡಲು ಬಾರದ ನಾಗರೀಕರು

ದೂರು ಕೊಡಲು ಬಾರದ ನಾಗರೀಕರು

ತಿಪಟೂರು, ಫೆ. 26: ಸಾರ್ವಜನಿಕರಿಂದು ಬಹಳ ಬುದ್ದಿವಂತರಾಗಿದ್ದು, ನಮ್ಮ ಕೆಲಸ ಹೇಗಾದರು ಸಾಕು ನಮಗೆ ಯಾರ ಸಹವಾಸವೂ ಬೇಡ ಎಂಬಂತಾಗಿದ್ದು ಎ.ಸಿ.ಬಿ ಸಾಮಾನ್ಯ ಸಭೆಗೆ ದೂರುಕೊಡಲು ಯಾರು ಮುಂದು ಬರುತ್ತಿಲ್ಲ.

ತಾಲ್ಲೂಕಿನ ನೊಣವಿನಕೆರೆಯಲ್ಲಿ ಇಂದು ಏರ್ಪಡಿಸಿದ್ದ ಭ್ರಷ್ಟಾಚಾರ ನಿಗ್ರಹ ದಳದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು ಎಲ್ಲಾ ಕೆಲಸಗಳನ್ನು ಬಿಟ್ಟು ಬಂದರೂ ದೂರುಕೊಡುವವರು ಮಾತ್ರ ಸಭೆಗೆ ಬರದೇ ಕೇವಲ ನಾಲ್ಕು ದೂರುಗಳು ಬಂದಿವೆ.

ಮದ್ಯಾಹ್ನ 112.00ಕ್ಕೆ ಆರಂಭವಾದ ಸಭೆಗೆ ಎಲ್ಲಾ ಅಧಿಕಾರಿಗಳು ಬಂದು ಕಾಯುತ್ತ ಕುಳಿತ್ತಿದ್ದರು ಸಭೆಗೆ ವೆಂಕಟಮ್ಮ ವೃದ್ದಾಪ್ಯವೇತನಕ್ಕಾಗಿ, ನೊಣವಿನಕೆರೆಯ ಲಕ್ಷ್ಮಣ ತನ್ನ ಸರ್ವೇನಂಬರ್ ವಿಚಾರವಾಗಿ ಮತ್ತು ಶಿವಾನಂದ ಈಸ್ವತ್ತು ಮಾಡಿಸುವ ವಿಚಾರವಾಗಿ ಅರ್ಜಿಗಳು ಬಂದಿದ್ದನ್ನು ಬಿಟ್ಟರೆ ಯಾವುದೇ ದೂರಗಳು ಎ.ಸಿ.ಬಿ ಬರದಿರುವುದು ಅನುಮಾನ ಮೂಡಿಸುವುದಲ್ಲದೇ ಇರಲು ಸಾಧ್ಯವಿಲ್ಲದಂತಾಗಿದೆ.

ಒಂದು ರೀತಿಯಲ್ಲಿ ನೋಡುವುದಾದರೆ ತಿಪಟೂರು ಎಲ್ಲಿ ರಾಮರಾಜ್ಯವಾಗಿ ಬಿಡುತ್ತಿದೆಯೋ ಇಲ್ಲಾ ಈ ರಾಜ್ಯದಲ್ಲಿ ದೂರುಕೊಟ್ಟು ಅಧಿಕಾರಿಗಳ ಎದುರು ಹಾಕಿಕೊಂಡು ತಮ್ಮ ಕೆಲವಾಗುವುದನ್ನು ಹಾಳುಮಾಡಿ ಕೊಳ್ಳುವುದು ಬೇಡ ಎಂಬ ಭಾವನೆ ಇಂದು ಲಂಚವನ್ನು ಕೊಟ್ಟು ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆಯೇ ಹೊಒರತು ಯಾವುದು ಸಾರ್ವಜನಿಕರು ದೂರುಕೊಡಲು ಮುಂದೆ ಬರುತ್ತಿಲ್ಲ.

ತಾಲ್ಲೂಕು ಪಂಚಾಯಿತಿಯವರು ಹೇಳುವಂತೆ ನಗರಪ್ರದೇಶದಲ್ಲಿ ದೂರುಕೊಡಲು ಗ್ರಾಮಾಂತರ ಪ್ರದೇಶದವರು ಕೆಲಸಬಿಟ್ಟು ಬರುವುದಿಲ್ಲವೆಂದು ತಿಳಿಸಿದರು ಅದರಂತೆ ನಾವೀಗ ಹೋಬಳಿವಾರು ಸಭೆಗಳನ್ನು ಮಾಡುತ್ತಿದ್ದೇವೆಂದು ತಿಳಿಸಿದರು.ಸಭೆಯಲ್ಲಿ ತಾ.ಪಂ ಇ.ಓ ಸುದರ್ಶನ್, ಸಿ.ಡಿ.ಪಿ.ಓ ಓಂಕಾರಪ್ಪ, ಬಿ.ಇ.ಓ ಮಂಗಳಗೌರಮ್ಮ, ಸಹಾಯಕ ಕೃಷಿ ನಿದೇರ್ಶಕ ಜಗನ್ನಾಥ ಗೌಡ ಮತ್ತಿತರ ಅಧಿಕಾರಿಗಳು.

ಫ್ರೆಶ್ ನ್ಯೂಸ್

Latest Posts

Featured Videos