ಇಂದು ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಸುಗ್ಗಿ

ಇಂದು ಸಿಲಿಕಾನ್ ಸಿಟಿಯಲ್ಲಿ ಸಿನಿಮಾ ಸುಗ್ಗಿ

ಬೆಂಗಳೂರು, ನ. 29: ಇಂದು ಸಿಲಿಕಾನ್ ಸಿಟಿಯಲ್ಲಿ ಚಲನಚಿತ್ರಗಳ ಸುಗ್ಗಿ ನಡೆಯಲಿದೆ. ಕನ್ನಡದ 9 ಚಿತ್ರಗಳು ಸೇರಿದಂತೆ ಒಟ್ಟು 45 ಚಿತ್ರಗಳು ತೆರೆ ಕಾಣುತ್ತಿವೆ. ಇದೇ ಮೊದಲ ಬಾರಿಗೆ ಹೆಚ್ಚು ಸಂಖ್ಯೆಯ ಚಿತ್ರಗಳು ಸಿಲಿಕಾನ್ ಸಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ನಗರದಲ್ಲಿ 100 ಚಿತ್ರ ಮಂದಿರಗಳು, ಹಾಗೂ 40 ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಮುಂದಿನ ನಿಲ್ದಾಣ, ದಮಯಂತಿ, ಬ್ರಹ್ಮಚಾರಿ, ರಣಹೇಡಿ, ಮಾರ್ಗರೇಟ್, ಕಿರು ಮಿನ್ಕಣಜ, ರಿವೀಲ್, ನಾನೇ ರಾಜ, ಮೂಕಜ್ಜಿಯ ಕನಸುಗಳು ಚಿತ್ರಗಳು ಈ ವಾರ ತೆರೆಕಾಣುತ್ತಿದೆ. ಇದರೊಂದಿಗೆ ಇತರೆ ಭಾಷೆಯ ಸಿನಿಮಾಗಳು ಸಹ ಪಟ್ಟಿಯಲ್ಲಿವೆ. ಅವೆಲ್ಲವನ್ನು ಸೇರಿಸಿದರೆ ಈ ವಾರ ಒಟ್ಟು 40 ಸಿನಿಮಾಗಳು ಕರ್ನಾಟಕದಲ್ಲಿ ತೆರೆ ಕಾಣಲಿವೆ.

ದಕ್ಷಿಣ ಭಾರತ ಚಿತ್ರಗಳೊಂದಿಗೆ ಮಾತ್ರ ಪೈಪೋಟಿ ನಡೆಸುತ್ತಿದ್ದ ಕನ್ನಡ ಚಿತ್ರರಂಗಕ್ಕೆ ಇದೀಗ ಉತ್ತರ ಭಾಷಾ ಸಿನಿಮಾಗಳು ಕೂಡ ಎದುರಾಗುತ್ತಿದೆ. ಅದರಂತೆ ಬೆಂಗಾಲಿ, ಗುಜರಾತಿ, ಮರಾಠಿ ಚಿತ್ರಗಳು ಬೆಂಗಳೂರಿಗೆ ಲಗ್ಗೆಯಿಡುತ್ತಿದೆ. ಇವುಗಳೊಂದಿಗೆ ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆಗಳು ಬೇರೆ. ಹೀಗಾಗಿ ಕಳೆದ ವಾರ ತೆರೆಕಂಡ 7 ಮತ್ತು ಈ ವಾರದ 9 ಕನ್ನಡ ಚಿತ್ರಗಳಲ್ಲಿ ಯಾವುದು ಚಿತ್ರಮಂದಿರದಲ್ಲಿ ಉಳಿಯಲಿದೆ ಎಂಬುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಕನ್ನಡದಲ್ಲಿ 9 ಚಿತ್ರಗಳು ರಿಲೀಸ್ ಆಗುತ್ತಿದ್ದರೆ, ತೆಲುಗಿನ 8 ಸಿನಿಮಾಗಳು ಕೂಡ ಇಂದೇ ಬಿಡುಗಡೆಯಾಗುತ್ತಿದೆ. ಹಾಗೆಯೇ ಮಲಯಾಳಂನ 4 ಚಿತ್ರಗಳು, ತಮಿಳಿನ 3 ಸಿನಿಮಾಗಳು ರಿಲೀಸ್ ಆಗಲಿದೆ. ಇದರೊಂದಿಗೆ ಬೆಂಗಾಲಿ ಭಾಷೆಯ 6, ಇಂಗ್ಲಿಷ್ನ 3, ಗುಜರಾತಿ ಮತ್ತು ಮರಾಠಿಯ ತಲಾ 2 ಚಿತ್ರಗಳು ತೆರೆ ಕಾಣಲಿವೆ. ಇದರೊಂದಿಗೆ ಪಂಜಾಬಿ ಚಿತ್ರವೊಂದು ಕೂಡ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos