ಚಿಪ್ಪುಹಂದಿ ಮಾರಾಟ ಕಳ್ಳರ ಬಂಧನ

ಚಿಪ್ಪುಹಂದಿ ಮಾರಾಟ ಕಳ್ಳರ ಬಂಧನ

ಪುಣೆ, ಅ. 13 : ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಪ್ರಾಣಿಯ ಮಾರಾಟ ಮಾಡುತ್ತಿದ್ದ 3ರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಂಕಣ ಗ್ರಾಮದ ಬಳಿಯಿಂದ ಪ್ಯಾಂಗೋಲಿನ್ ಪ್ರಾಣಿಯನ್ನು ಮಾರಾಟ ಮಾಡಲು ತಂದಿದ್ದ ಮೂವರು ವ್ಯಕ್ತಿಗಳನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಬಂಧಿಸಿದ್ದಾರೆ.
ಪ್ಯಾಂಗೋಲಿನ್ ಇರುವೆ ಭಕ್ಷಕ ಪ್ರಾಣಿಯಾಗಿದ್ದು ಯಾರಿಗೂ ತೊಂದರೆ ನೀಡದ ನಿರುಪದ್ರವ ಪ್ರಾಣಿ . ಇದು ಚಿಪ್ಪುಗಳನ್ನು ಒಳಗೊಂಡಿದೆ. ಎರಡು ಕಣ್ಣುಗಳಿದ್ದರೂ ಸೂಕ್ಷ್ಮ ದೃಷ್ಟಿಯಿಲ್ಲ. ಕೇವಲ ವಾಸನೆಯ ಆಧಾರದ ಮೇಲೆ ಇರುವೆ ಗೆದ್ದಲುಗಳನ್ನು ತಿನ್ನುತ್ತದೆ. ತನ್ನ ಶರೀರದಷ್ಟು ಉದ್ದದ ನಾಲಿಗೆಯನ್ನು ಹೊಂದಿದ್ದರಿಂದ, ಅಂಟು ಉಳ್ಳ ನಾಲಿಗೆಗೆ ಇರುವೆಗಳು ಅಂಟಿಕೊಳ್ಳುತ್ತದೆ. ಗಟ್ಟಿಯಾದ ಹುತ್ತವನ್ನು ಕೂಡ ಕ್ಷಣ ಮಾತ್ರದಲ್ಲಿ ಅಗೆಯಬಲ್ಲದು. ಇದರ ಜೀವಿತಾವದಿ 20 ವರ್ಷ ಮಾತ್ರ.

ಫ್ರೆಶ್ ನ್ಯೂಸ್

Latest Posts

Featured Videos