ಉಗ್ರರನ್ನು ಬೆಂಬಲಿಸದಂತೆ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ

ಉಗ್ರರನ್ನು ಬೆಂಬಲಿಸದಂತೆ ಪಾಕಿಸ್ತಾನಕ್ಕೆ ಚೀನಾ ಎಚ್ಚರಿಕೆ

ನವದೆಹಲಿ,
ನ್ಯೂಸ್ ಎಕ್ಸ್ ಪ್ರೆಸ್. ಫೆ.27:
ರಾಜತಾಂತ್ರಿಕ ಮಟ್ಟದಲ್ಲಿ
ಭಾರತ ಮತ್ತೊಂದು ಯಶಸ್ಸು ಸಾಧಿಸಿದೆ. ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು
ಕೂಡಲೆ ಸ್ಥಳಿತಗೊಳಿಸಬೇಕೆಂದು ಹೇಳಿದೆ.

ಭಾರತದ ವಿರುದ್ಧ ಯುದ್ಧ ಹೂಡಲು ಸನ್ನದ್ಧವಾಗಿರುವ
ಪಾಕಿಸ್ತಾನಕ್ಕೆ ಚೀನಾ ಖಡಕ್ ಎಚ್ಚರಿಕೆ ನೀಡಿದ್ದು, ಪಾಕಿಸ್ತಾನದಲ್ಲಿ ಕೂಡಲೆ ಭಯೋತ್ಪಾದಕ ಸಂಘಟನೆಗೆ
ನೀಡುತ್ತಿರುವ ಬೆಂಬಲ ನಿಲ್ಲಿಸಬೇಕೆಂದು ಹೇಳಿದೆ.

ಇದಕ್ಕೂ ಮೊದಲು, ದೊಡ್ಡಣ ಅಮೆರಿಕ ಕೂಡ
ಭಾರತದ ವಿರುದ್ಧ ಪ್ರತಿದಾಳಿ ನಡೆಸದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆಯನ್ನು
ನಿರ್ಲಕ್ಷಿಸಿರುವ ಪಾಕಿಸ್ತಾನ, ಬುಧವಾರ ಭಾರತದ ಮೇಲೆ ಬಾಂಬ್ ಹಾಕಿದೆ.

ರಾಜಕೀಯ ಮತ್ತು ರಾಜತಾಂತ್ರಿಕ ಹೆಗ್ಗುರಿಯನ್ನು
ಸಾಧಿಸಲಿಕ್ಕಾಗಿ ಭಯೋತ್ಪಾದನೆಯನ್ನು ಮಾಡುವುದು ಮತ್ತು ಭಯೋತ್ಪಾದಕಾ ಸಂಘಟನೆಗಳನ್ನು ಬೆಂಬಲಿಸುವುದು
ಸರ್ವಥಾ ಸಲ್ಲದು ಎಂದು ಚೀನಾ ಕಟು ಮಾತುಗಳಲ್ಲಿ ಪಾಕಿಸ್ತಾನಕ್ಕೆ ಹೇಳಿದೆ.

ಚೀನಾದ ಸ್ನೇಹ ಸಂಪಾದಿಸಿರುವ ಪಾಕಿಸ್ತಾನಕ್ಕೆ
ಕನಿಷ್ಠಪಕ್ಷ ಚೀನಾ ಬೆಂಬಲ ನೀಡಬಹುದು ಎಂಬ ಹವಣಿಕೆಯಲ್ಲಿತ್ತು. ಆದರೆ, ಚೀನಾ ಕೂಡ ಪಾಕಿಸ್ತಾನದೊಡನೆ
ದೂರ ಕಾಪಾಡಿಕೊಳ್ಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಭಾರತದ ಯಾವುದೇ ಯುದ್ಧ ವಿಮಾನಗಳ ತಂಟೆಗೆ
ಹೋಗದಂತೆ ವಾಯು ಸೇನೆಗೆ ನಿರ್ದೇಶನ ನೀಡಿದೆ ಎಂಬ ಸುದ್ದಿ ಬರುತ್ತಿದೆ. ಅಲ್ಲದೆ, ಪರಿಸ್ಥಿತಿಯನ್ನು
ಸಡಿಲಗೊಳಿಸಿ ಶಾಂತಿಗೆ ಮುಂದೆ ಬರುವಂತೆ ಪಾಕಿಸ್ತಾನ ಕೋರಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬರುತ್ತಿದೆ.

ಭಾರತ, ರಷ್ಯಾ ಮತ್ತು ಚೀನಾದ ವಿದೇಶಾಂಗ
ಸಚಿವರ ಸಭೆಯಲ್ಲಿ ಎಲ್ಲ ರೀತಿಯ ಭಯೋತ್ಪಾದನೆಯನ್ನು ನಿಗ್ರಹಿಸಬೇಕೆಂದು ಒಕ್ಕೊರಲ ನಿರ್ಣಯ ತೆಗೆದುಕೊಳ್ಳಲಾಗಿದೆ.
ಭಯೋತ್ಪಾದನೆ ಮಾಡುವುದಾಗಲಿ, ಅದಕ್ಕೆ ಉತ್ತೇಜನ ನೀಡುವುದಾಗಲಿ, ಬೆಂಬಲಿಸುವುದಾಗಲಿ ಮಾಡಿದರೆ, ಅಂಥ
ರಾಷ್ಟ್ರದ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕಟ್ಟೆಚ್ಚರಿಕೆ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos