ಚೀನಾ ದಾಳಿ: ಮೋದಿ ಸರ್ಕಾರ ಗಾಢ ನಿದ್ರೆಯಲ್ಲಿತ್ತೆಂದ ರಾಹುಲ್ ಗಾಂಧಿ

ಚೀನಾ ದಾಳಿ: ಮೋದಿ ಸರ್ಕಾರ ಗಾಢ ನಿದ್ರೆಯಲ್ಲಿತ್ತೆಂದ ರಾಹುಲ್ ಗಾಂಧಿ

ನವದೆಹಲಿ: ಲಡಾಖ್’ನ ಗಲ್ವಾನ್ ಕಣಿವೆಯಲ್ಲಿ ಚೀನಾದ ದಾಳಿ ಪೂರ್ವಯೋಜಿತವಾಗಿತ್ತು. ಹುತಾತ್ಮರಾದ ಯೋಧರ ಜೀವಕ್ಕೆ ಬೆಲೆ ಕಟ್ಟಲಾಗದು. ಆದರೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಾತ್ರ ಗಾಢ ನಿದ್ರೆಯಲ್ಲಿತ್ತು ಎನ್ನುವುದು ಈಗ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಭಾರತ-ಚೀನಾ ಗಡಿಯಲ್ಲಿನ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ಕರೆದ ಸರ್ವಪಕ್ಷ ಸಭೆಗೆ ಮುಂಚಿತವಾಗಿ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.

ಪೂರ್ವ ಲಡಾಕ್‌ನ ಗಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾದ ಸೈನಿಕರೊಂದಿಗಿನ ಘರ್ಷಣೆಯಲ್ಲಿ ಕರ್ನಲ್ ಸೇರಿದಂತೆ 20 ಭಾರತೀಯ ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಇದು ಐದು ದಶಕಗಳಲ್ಲಿ ನಡೆದ ಅತಿದೊಡ್ಡ ಮಿಲಿಟರಿ ಮುಖಾಮುಖಿ.

ಕೇಂದ್ರ ಸರ್ಕಾರ ಗಡಿ ಸಮಸ್ಯೆಯನ್ನು ನಿರಾಕರಿಸಿದೆ. ಆದರೆ ಸರ್ಕಾರದ  ಗಡಿಕಾಯುವ ಯೋಧರು ಬೆಲೆ ತೆತ್ತಿದ್ದಾರೆ” ರಾಹುಲ್ ಗಾಂಧಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ರಕ್ಷಣಾ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಅವರನ್ನು ಉಲ್ಲೇಖಿಸಿದ ವರದಿಯನ್ನೂ ಸಹ ರಾಹುಲ್ ಗಾಂಧಿ ಟ್ಯಾಗ್ ಮಾಡಿದ್ದಾರೆ. ಈ ದಾಳಿಯನ್ನು ಚೀನಾ ಮೊದಲೇ ಯೋಜಿಸಿತ್ತು ಮತ್ತು ಭಾರತೀಯ ಪಡೆಗಳು ಸೂಕ್ತ ಉತ್ತರ ನೀಡುತ್ತವೆ ಎಂದು ಹೇಳಿದ್ದಾರೆ. ಎಲ್‌ಎಸಿ ನಲ್ಲಿ ಗಡಿಭದ್ರತೆ ಆತಂಕವಿರುವ ಬಗ್ಗೆ ರಾಹುಲ್ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ. ಚೀನಿಯರು ಭಾರತೀಯ ಭೂಪ್ರದೇಶವನ್ನು ಹೇಗೆ ಆಕ್ರಮಿಸಿಕೊಂಡಿದ್ದಾರೆ ಮತ್ತು ಲಡಾಖ್‌ನಲ್ಲಿ ಭಾರತೀಯ ಸೈನಿಕರನ್ನು ನಿರಾಯುಧವಾಗಿ ಸಾವನ್ನಪ್ಪುವಂತೆ ಮಾಡಲು ಕಾರಣವೇನು ಎಂದು ಅವರು ಮೋದಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos