ಅನುಘಟ್ಟ ಸರಕಾರಿ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ

ಅನುಘಟ್ಟ ಸರಕಾರಿ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ

ಬೇಲೂರು, ಡಿ. 12: ತಾಲ್ಲೂಕಿನ ಅರೇಹಳ್ಳಿ ಕ್ಲಸ್ಟರ್ ಮಟ್ಟದ ಸರಕಾರಿ ಶಾಲೆಗಳ 6,7ನೇ ತರಗತಿ ವಿದ್ಯಾರ್ಥಿಗಳು  ಮತ್ತು ಶಾಲೆಯ ಶಿಕ್ಷಕರಿಂದ  ಅನುಘಟ್ಟ ಸರಕಾರಿ ಪ್ರಾಥಮಿಕ  ಶಾಲೆಯಲ್ಲಿ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಆಚರಿಸಲಾಯಿತು.

ತಾಲ್ಲೂಕಿನ ಅರೇಹಳ್ಳಿ ಕ್ಲಸ್ಟರ್ ನ ಹಿರಿಯ ಪ್ರಾಥಮಿಕ ಶಾಲೆಗಳ 6 ಮತ್ತು 7 ತರಗತಿ ಮಕ್ಕಳು ಆಗಮಿಸಿದ್ದು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು 5 ಗುಂಪುಗಳಾಗಿ ರಚನೆ ಮಾಡಿ ವಿಜ್ಞಾನದ  ಆಡು- ಹಾಡು, ಚುಕ್ಕಿ-ಚಂದ್ರಮ, ಕಾಗದ-ಕತ್ತರಿ,  ಊರು ಸುತ್ತೋಣ, ಮಾಡು- ಹಾಡು ಹೀಗೆ  ವೈಜ್ಞಾನಿಕ ವಿಷಯಗಳನ್ನ ಬಿತ್ತರಿಸುವ ಮನೋರಂಜನೆ ಚಟುವಟಿಕೆಗಳನ್ನ ಶಾಲೆಯಲ್ಲಿ ಆಚರಿಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನ  ಅನುಘಟ್ಟ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಧರ್ ವಹಿಸಿದ್ದರು, ಬೆಳ್ಳಾವರ ಶಾಲೆಯ ಮುಖ್ಯ ಶಿಕ್ಷಕರಾದ ಜಯಣ್ಣ ಬಿ, ಅನುಘಟ್ಟ ಶಾಲಯ ಸಂಪನ್ಮೂಲ ವ್ಯಕ್ತಿ ಮಂಜಪ್ಪ, ಪುಷ್ಪರಾಜು, ನಾಗಪ್ಪ ವಡ್ಡರ್,  ಹಾಗೂ ಹಲವು ಶಾಳೆಯ ಶಿಕ್ಷಕರು, ವಿದ್ಯಾರ್ಥಿಗಳಿ,ಪೊಷಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos