ಚಿಕ್ಕಮಗಳೂರು: ಮರಗಳ ಮಾರಣಹೋಮ

ಚಿಕ್ಕಮಗಳೂರು: ಮರಗಳ ಮಾರಣಹೋಮ

ಚಿಕ್ಕಮಗಳೂರು, ಫೆ. 01: ರಸ್ತೆ ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಮರಗಳ ಮಾರಣ ಹೋಮವೇ ನಡೆದು ಹೋಗಿದೆ. ಅರಣ್ಯ ಇಲಾಖೆಯ ಅನುಮತಿ ಪಡೆದೇ 4 ಸಾವಿರಕ್ಕೂ ಅಧಿಕ ಮರಗಳು ನೆಲಕ್ಕೆ ಉರುಳಿ ಬಿದ್ದಿವೆ. ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಸಹಸ್ರಾರು ಮರಗಳು ನೆಲಕುರುಳಿದ್ರು ಪರಿಸರವಾದಿಗಳು ಕೂಡ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಕಾಮಗಾರಿ ಬಳಿಕ ಮರ ಕಡಿದ ಜಾಗದಲ್ಲಿ ಸಸಿ ನೆಟ್ಟು ಪೋಷಣೆ ಮಾಡುವುದಾಗಿ ಅರಣ್ಯ ಇಲಾಖೆಯವರು ಸ್ಥಳೀಯರಿಗೆ ತಿಳಿಸಿದ್ದಾರಂತೆ.

ಇದು ಚಿಕ್ಕಮಗಳೂರು-ಕಡೂರು ನಡುವಿನ ರಸ್ತೆ ಕಾಮಗಾರಿ ಆರಂಭಗೊಂಡಿದೆ, ದಶಕಗಳಿಂದ ಸಾರ್ವಜನಿಕರು ಈ ರಸ್ತೆ ಅಭಿವೃದ್ಧಿ ಆಗಬೇಕೆಂಬ ಮಹದಾಸೆ ಹೊಂದಿದ್ರು. ಅದ್ರಂತೆ ರಾಷ್ಟ್ರೀಯ ಹೆದ್ದಾರಿ 173 ರಸ್ತೆ ಕಾಮಗಾರಿಯ ಏನೋ ಭರದಿಂದ ನಡೆಯುತ್ತಿದೆ. ಆದರೆ ಇದಕ್ಕಾಗಿ 40 ಕಿ.ಮೀ. ವ್ಯಾಪ್ತಿಯಲ್ಲಿ ಎರಡೂ ಬದಿ ಇರುವ ಮರಗಳನ್ನ ಕಡಿದು ಸಾಗಿಸಲಾಗುತ್ತಿದೆ. ಮುಖ್ಯವಾಗಿ ನೇರಳೆ, ಹಲಸು, ಮಾವಿನ ಮರಗಳು ಸೇರಿದಂತೆ ಎಲ್ಲಾ ಜಾತಿ ಮರಗಳನ್ನು ಕಡಿಯಲಾಗಿದೆ. ಕೆಲವೊಂದು ಬೃಹತ್ ಗಾತ್ರದ ಮರಗಳನ್ನು ಜೆಸಿಬಿಯಿಂದ ಬೇಕಾಬಿಟ್ಟಿಯಾಗಿ ಕಡಿದು ಹಾಕಲಾಗುತ್ತಿದೆ, ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ರಾಷ್ಟ್ರಿಯ ಹೆದ್ದಾರಿ 173 ವಿಸ್ತರಣೆ ಕಾಮಗಾರಿಯಲ್ಲಿ ಮರಗಳ ಮಾರಣಹೋಮ ಮುಂದುವರಿದಿದೆ. ಮೊದಲನೇ ಹಂತದಲ್ಲಿ 1 ಸಾವಿರದ137, ಎರಡನೇ ಹಂತದಲ್ಲಿ 2ಸಾವಿರದ 318 ಮರಗಳ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಕಡೂರು ಚಿಕ್ಕಮಗಳೂರು ರಸ್ತೆಯನ್ನು ಈಗ ಒಮ್ಮೆ ನೋಡಿದ್ರೆ ಮರಗಳು ಮಾಯವಾಗಿ ಬಟಾ ಬಯಲಾಗಿ ಕಾಣುತ್ತಿದೆ. ಕಡಿಯಲಾದ ಒಂದು ಮರದ ಬದಲಿಗೆ 10 ಗಿಡಿಗಳನ್ನು ನೆಟ್ಟು ಪೋಷಿಸಬೇಕೆಂಬ ಮಾರ್ಗಸೂಚಿ ಇದೆ. ಆದ್ರೆ ಅರಣ್ಯ ಇಲಾಖೆ ಗಿಡಿಗಳನ್ನು ಬೆಳೆಸಲು ಯಾವುದೇ ಸಿದ್ದತೆಯನ್ನೇ ಮಾಡಿಕೊಂಡಿಲ್ಲ, ಕಾಮಗಾರಿ ಬಳಿಕ ಸಸಿ ನೆಟ್ಟು ಪೋಷಣೆ ಮಾಡುವ ಬಗ್ಗೆ ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.

 

ಫ್ರೆಶ್ ನ್ಯೂಸ್

Latest Posts

Featured Videos