ಸಿಇಓ ಶುಭಾ ಕಲ್ಯಾಣ್ ಕೋವಿಡ್ ಅರಿವು

ಸಿಇಓ ಶುಭಾ ಕಲ್ಯಾಣ್ ಕೋವಿಡ್ ಅರಿವು

ತುಮಕೂರು: ಜಿಲ್ಲೆಯಲ್ಲಿ ಕೋವಿಡ್-೧೯ನ್ನು ನಿಯಂತ್ರಿಸುವ ಸಂಬಂಧ ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್ ಅವರು ತುಮಕೂರು ತಾಲ್ಲೂಕು ಹೆಬ್ಬೂರು ಗ್ರಾಮದ ಸಂತೆಗೆ ತೆರಳಿ ಜನರಿಗೆ ಕೊರೋನಾ ನಿಯಂತ್ರಣ ಕುರಿತಂತೆ ಭಿತ್ತಿಪತ್ರ ನೀಡಿ ಅರಿವು ಮೂಡಿಸಿದರು.
ಆನಂತರ ಮಾತನಾಡಿದ ಅವರು, ಕೋವಿಡ್-೧೯ರ ಸೋಂಕನ್ನು ನಿಯಂತ್ರಿಸಲು ಪರಿಣಾಮಕಾರಿಯಾದ ಚಟುವಟಿಕೆಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಚಳಿಗಾಲ ಪ್ರಾರಂಭವಾಗಲಿದೆ ಹಾಗೂ ಅನೇಕ ಹಬ್ಬ ಮತ್ತು ಹರಿದಿನಗಳ ಸಮಯವಾಗಿರುವುದರಿಂದ ಕೋವಿಡ್-೧೯ ರ ನಿಯಂತ್ರಣ ಸಾರ್ವಜನಿಕರ ಸಹಕಾರವಿಲ್ಲದೆ ಕಷ್ಟ ಸಾಧ್ಯವಾಗಲಿದೆ. ಸಂತೆಗಳು ಮತ್ತು ಮಾರುಕಟ್ಟೆಗಳಲ್ಲಿ ಕೋವಿಡ್-೧೯ ಪರೀಕ್ಷೆಗಳನ್ನು ಆಯೋಜಿಸಲು, ಬಿತ್ತಿ ಪತ್ರಗಳಲ್ಲಿ ಬ್ಯಾನರ್‌ಗಳಲ್ಲಿ, ಪೋಸ್ಟರ್‌ಗಳಲ್ಲಿ ಕೋವಿಡ್ ೧೯ರ ಜಾಗೃತಿ ಮಾಹಿತಿಯನ್ನು ಅಳವಡಿಸಿ ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು. ಪ್ರಮುಖ ಘೋಷ ವಾಕ್ಯವಾದ “ಮಾಸ್ಕ್ ಧಾರಣೆ, ಕರ ಶುಚಿತ್ವ ಮತ್ತು ಪರಸ್ಪರ ೬ ಅಡಿಗಳ ಅಂತರ”ವನ್ನು ವಿವಿಧ ಸಂವಹನಗಳ ಮೂಲಕ ಆಂದೋಲನದ ಮಾದರಿಯಲ್ಲಿ ಪ್ರಚಾರ ಕೈಗೊಳ್ಳಲಾಗುತ್ತಿದೆ ಎಂದರು.
ಹೆಬ್ಬೂರಿನಲ್ಲಿ ಸಂತೆಯ ಅಂಗಡಿಗಳು ಮತ್ತು ಸಂತೆಗೆ ಬರುವ ಜನರಲ್ಲಿ ಕೋವಿಡ್-೧೯ರ ನಿಯಂತ್ರಣ ಕುರಿತಂತೆ, ಕೋವಿಡ್-೧೯ರ ಪ್ರಮುಖ ಘೋಷವಾಕ್ಯ “ಮಾಸ್ಕ್ ಧಾರಣೆ, ಕರ ಶುಚಿತ್ವ ಮತ್ತು ಪರಸ್ಪರ ೬ ಅಡಿ ಅಂತರ” ಬಳಕೆಯ ಬಗ್ಗೆ ಬಿತ್ತಿ ಪತ್ರ ನೀಡಿ ಅರಿವು ಮೂಡಿಸಿದರು. ಅಲ್ಲದೆ ಸಂತೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು, ಮಾರಾಟಗಾರರು, ಅಂಗಡಿ ಮಾಲೀಕರಿಗೆ ಜಾಥಾ ಮೂಲಕ ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos