ನೂತನ ಹೈಟೆಕ್ ಬುನ್ನಿಸ್ ಫಿಟ್ನೆಸ್ ಜಿಮ್ ಕೇಂದ್ರ ಆರಂಭ

ನೂತನ ಹೈಟೆಕ್ ಬುನ್ನಿಸ್ ಫಿಟ್ನೆಸ್ ಜಿಮ್ ಕೇಂದ್ರ ಆರಂಭ

ಯಲಹಂಕ, ಸೆ. 9: ಯಲಹಂಕ ಸಮೀಪದ ಲಕ್ಷ್ಮೀಪುರ ಕ್ರಾಸ್ ಸಂಭ್ರಮ ಕಾಲೇಜಿನ ಪಕ್ಕದಲ್ಲಿ ನೂತನ ಹೈಟೆಕ್ ” ಬುನ್ನೀಸ್  ಫಿಟ್ನೆಸ್” ಜಿಮ್ ಕೇಂದ್ರವನ್ನುಇಂದು ನಟ ನಿರ್ದೇಶಕ ಪ್ರೇಮ್ ಉದ್ಘಾಟಿಸಿದರು.

ಈ ವೇಳೆ ಜಿಮ್ ನ  ಮಾಲೀಕ ಪ್ರದೀಪ್ ಕುಮಾರ್ ಮಾತನಾಡಿ “ಉತ್ಸಾಹ ವೃತ್ತಿಯಾಗಿ ಬದಲಾಗುತ್ತಿದೆ ಸಾಫ್ಟ್ವೇರ್ ಎಂಜಿನಿಯರ್  ಕೂಡ ವೃತ್ತಿಪರ ಬಾಡಿಬಿಲ್ಡರ್ ಗಳಾಗಿದ್ದಾರೆ. ವೃತ್ತಿ ಜೀವನದಲ್ಲಿ ಯಾರು ತನ್ನನ್ನು ತಾನು ತೊಡಗಿಸಿಕೊಳ್ಳುವ ಕನಸು ಹೊಂದಿದ್ದರೂ ಕೂಡ ದೇಹದ ಆರೋಗ್ಯ ಮುಖ್ಯ. ಹಾಗಾಗಿ ಮನುಷ್ಯನಿಗೆ ಫಿಟ್ನೆಸ್ ಮುಖ್ಯವಾಗುತ್ತದೆ. ನಮ್ಮ ಈ ಕೇಂದ್ರದಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಯಂತ್ರೋಪಕರಣಗಳು ಹಾಗೂ ನುರಿತ ತರಬೇತುದಾರರು ಇದ್ದಾರೆ”ಎಂದರು.

ಈ ವೇಳೆ ಮಾಜಿ ಸಂಸದ ಶಿವರಾಮೇಗೌಡ, ವಿಧಾನಪರಿಷತ್ ಸದಸ್ಯ ಕಾಂತರಾಜು, ಮಾಜಿ ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಪಾಲಿಕೆ ಸದಸ್ಯ ಕೆ. ನಾಗಭೂಷಣ್, ಜೆಡಿಎಸ್ ಮುಖಂಡ ಚರಣ್ ಗೌಡ, ಆಧ್ಯಾ ಪೌಂಡೇಶನ್ ಸಂಸ್ಥಾಪಕ ಕಿರಣ್ ಕುಮಾರ್, ವೆಂಕಟೇಶ್ ಬಾಬು  ಆಗಮಿಸಿ ಶುಭಕೋರಿದರು.

ಫ್ರೆಶ್ ನ್ಯೂಸ್

Latest Posts

Featured Videos