ರಾಜ್ಯದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮ

ರಾಜ್ಯದೆಲ್ಲೆಡೆ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮ

ಬೆಂಗಳೂರು : ನಾಡಿನಾದ್ಯಂತ ಶ್ರೀಕೃಷ್ಣ ಜನ್ಮಾಷ್ಠಮಿಯ ಸಂಭ್ರಮ, ಸಡಗರ ಮನೆ ಮಾಡಿದೆ. ಶ್ರಾವಣ ಮಾಸದಲ್ಲಿ ಬರುವ ಈ ಹಬ್ಬವು ಕೃಷ್ಣಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ.

ಶ್ರೀಕೃಷ್ಣ ಜನ್ಮಾಷ್ಠಮಿ ವಿಷ್ಣವಿನ ಎಂಟನೇ ಅವತಾರವಾದ ಕೃಷ್ಣನ ಜನನವನ್ನು ಸೂಚಿಸುವ ವಾರ್ಷಿಕ ಹಿಂದೂ ಹಬ್ಬವಾಗಿದೆ. ಇದನ್ನು ಕೃಷ್ಣಪಕ್ಷದ ಎಂಟನೇ ದಿನದಂದು ಭಾದ್ರಪದ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತದೆ. ಈ ವರ್ಷ, ಜನ್ಮಾಷ್ಠಮಿಯನ್ನು ಸೋಮವಾರ (ಇಂದು) ಶ್ರದ್ಧಭಕ್ತಿಯಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಇನ್ನು ತಮ್ಮ ಮನೆಯ ಪುಟಾಣಿ ಮಕ್ಕಳಿಗೆ ಕೃಷ್ಣನ ವೇಷ ಧರಿಸಿ ಸಂಭ್ರಮಿಸುವುದು ರೂಢಿಯಲ್ಲಿದೆ.

ಮಧ್ಯರಾತ್ರಿಯಲ್ಲಿ ಕೃಷ್ಣ ಜನಿಸಿದ ಕಾರಣ, ಅವನಿಗಾಗಿ ಪೂಜೆಯನ್ನು ನಿಶಿತಾ ಕಾಲದಲ್ಲಿ ಮಾಡಲಾಗುತ್ತದೆ. ಜನ್ಮಾಷ್ಠಮಿಯಂದು ಭಕ್ತರು ಉಪವಾಸವನ್ನು ಆಚರಿಸುತ್ತಾರೆ, ಪೂಜೆ ಮಾಡಿದ ನಂತರ ಅಂದರೆ ಮರುದಿನ ಬೆಳಿಗ್ಗೆ ಉಪವಾಸವನ್ನು ಮುರಿಯುತ್ತಾರೆ, ಹೀಗೆ ಮಾಡುವುದರಿಂದ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಎಂಬುದು ಜನರ ನಂಬಿಕೆ. ಇದನ್ನು ಹಿಂದಿಯಲ್ಲಿ `ಪರಾನ್’ ಎಂದು ಕರೆಯಲಾಗುತ್ತದೆ.
ಧರ್ಮಗ್ರಂಥಗಳ ಪ್ರಕಾರ, ಗ್ರಹಸ್ಥರು ವ್ರತವನ್ನು ಆಚರಿಸಬೇಕು. ಹಿಂದೂ ಪಂಚಾಂಗದ ಪ್ರಕಾರ, ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಪರಮಾತ್ಮಾನ ಜನನವಾಗಿತ್ತು. ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ಕೃಷ್ಣಾವತಾರವು ಜಗತ್ತಿನ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಎಂದು ಹೇಳುತ್ತದೆ.

ಶ್ರೀಕೃಷ್ಣ ಜನ್ಮಾಷ್ಠಮಿಯಂದು ಭಕ್ತರು ಮಕ್ಕಳಿಗೆ ಕೃಷ್ಣ ವೇಷಧರಿಸಿ ತಮ್ಮ ಮಕ್ಕಳಲ್ಲೇ ಕೃಷ್ಣಪರಮಾತ್ಮನನ್ನು ಕಾಣುತ್ತ ಸಂತಸದಿಂದ ನಗರದಲ್ಲಿರುವ ಇಸ್ಕಾನ್ ಟೆಂಪಲ್ ಹಾಗೂ ಕೃಷ್ಣ ದೇವಾಲಯಗಳಿಗೆ ತೆರಳಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos