ಬೆಂಗಳೂರು: ಕಾವೇರಿ ನೀರು ತಮಿಳುನಾಡಿಗೆ ಹರಿಸುವ ವಿಚಾರ. ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದೆ. ಇವತ್ತಿನ ನ್ಯಾಯ ಗೌರವ ಕಾಪಾಡುವ ನಮ್ಮ ದೃಷ್ಟಿ ಇದೆ. ಸಿಎಂ ಡಿಸಿಎಂ ಸಮರ್ಥರು ಇದ್ದಾರೆ. ಯಾವ ರೀತಿ ನಾಡು, ಜಲ ಬಂದಾಗ ಸಮರ್ಥವಾಗಿ ಎದುರಿಸುತ್ತಾರೆ. ಸದ್ಯ ನಮಗೆ ಕ್ಲಿಷ್ಟಕರ ಪರಿಸ್ಥಿತಿ ಬಂದಿದೆ. ಕೋರ್ಟ್ ಗೌರವ ಕೊಟ್ಟು ನೀರು ಬಿಡುವುದು ಒಂದು ಹಂತ ಆದ್ರೆ. ಜನರ ಹಿತ ಕಾಪಾಡುವುದು ಒಂದು.
ಸಿಎಂ ಡಿಸಿಎಂ ಇದರಲ್ಲಿ ಸಮರ್ಥರು ಇದ್ದಾರೆ. ನೀರನ್ನು ಉಳ್ಳುವ ಬಗ್ಗೆ ಸರಣಿ ಸಭೆ ನಡೆಸುತ್ತಿದ್ದಾರೆ. ಕೆಆರ್ ಎಸ್ ನಲ್ಲಿ ನೀರು ಖಾಲಿ ಆಗುತ್ತಿದೆ. ನೀರು ಎಲ್ಲಿಂದ ಕೊಡುವುದೋ ಗೊತ್ತಾಗುತ್ತಿಲ್ಲ. ಅದರ ಬಗ್ಗೆ ಸಿಎಂ, ಡಿಸಿಎಂ ಚರ್ಚೆ ಮಾಡ್ತ ಇದ್ದಾರೆ. ವಿರೋಧ ಪಕ್ಷಗಳು ನೀರು ಬಿಡಬೇಡಿ ಎಂಬ ಸಲಹೆ ವಿಚಾರ. ಖಂಡಿತವಾಗಿಯೂ ಅವರ ಸಲಹೆ ತೆಗೆದುಕೊಳ್ಳುವುದಿಲ್ಲ. ಅವರು ವಿರೋಧ ಪಕ್ಷವಾಗಿ ಹೇಳುತ್ತಿದ್ದಾರೆ. ಅವರ ಸಿಎಂ ಇದ್ದಾಗ ನ್ಯಾಯ ಗೌರವ ಕೊಡುತ್ತಿರಲಿಲ್ಲವಾ. ಕೇಂದ್ರ ಸರ್ಕಾರವನ್ನು ಬಿಜೆಪಿ ನಡೆಸುತ್ತಿದೆ. ಪ್ರಧಾನಿ ಮಧ್ಯ ಪ್ರವೇಶ ಮಾಡಿದ್ರೆನೇ ಸಮಸ್ಯೆ ಬಗೆಹರಿಯುತ್ತೆ. ಎರಡು ರಾಜ್ಯಗಳ ರೈತರ ಹಿತ ಮುಖ್ಯ. ಅಲ್ಲಿ ರೈತರು ಇದ್ದಾರೆ ನಮ್ಮಲ್ಲೂ ರೈತರು ಇದ್ದಾರೆ.
ನಮಗೆ ರೈತರ ಜತೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತೆ. ಎರಡು ಪ್ರಭಾವಿ ರಾಜ್ಯಗಳ ಮಧ್ಯೆ ಮೋದಿ ಪ್ರವೇಶ ಮಾಡಬೇಕು. ಎರಡು ರಾಜ್ಯಗಳು ಅಣ್ಣ ತಮ್ಮಂದಿರ ಜತೆ ಇದ್ದಾವೆ. ಇಂತಹ ಸಮಸ್ಯೆ ಬಂದಾಗ ಪ್ರಧಾನಿಯವರು ಮಧ್ಯೆ ಪ್ರವೇಶ ಮಾಡಬೇಕು. ನೀವೇ ಬಗೆಹರಿಸಿಕೊಳ್ಳಿ ಅಂತ ಹೇಳುವುದು ಎಂತ ಧೋರಣೆ ಅದನ್ನು ಖಂಡಿಸುತ್ತೇನೆ. ಪ್ರಾಧಿಕಾರಕ್ಕೂ ತನ್ನದೇ ಆದಾ ಹಿತ ಮಿತಿ ಇದೆ. ಸರ್ವಪಕ್ಷಗಳ ಸಭೆ ಕೂಡ ಇದರ ವಿಚಾರವಾಗಿ ನಡೆಸಿದ್ವಿ. ನಾಡುನುಡಿ ಅಂತ ಬಂದಾಗ ನಾವು ಒಟ್ಟಾಗಿ ಹೋರಾಟ ಮಾಡಬೇಕು. ಮೇಲ್ ಮನವಿ ಮಾಡಲು ಚರ್ಚೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಮಳೆ ಅಭಾವ ಆಗಿ ಬರ ಇದೆ. ನಮ್ಮಲ್ಲಿ ನೀರು ಇಲ್ಲ, ಕೋರ್ಟ್ ಆದೇಶಕ್ಕೆ ತಲೆ ಬಾಗಲೇ ಬೇಕು. ನೀರಾವರಿ ವಿಚಾರದಲ್ಲಿ ನನಗೆ ಜ್ಞಾನ ಕಡಿಮೆ. ರೈತರ ಹಿತ ಕಾಪಾಡುವಲ್ಲಿ ನಮ್ಮ ಸರ್ಕಾರ ಧೃಡವಾಗಿದೆ..