ಕಾರಿನ ಚಕ್ರ ಕಳವು : ಆರೋಪಿಗಳ ಬಂಧನ

ಕಾರಿನ ಚಕ್ರ ಕಳವು : ಆರೋಪಿಗಳ ಬಂಧನ

ಶಿವಮೊಗ್ಗ, ಡಿ.10 : ಕಂಪನಿಯ ಕಾರುಗಳ ಚಕ್ರಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿನೋಬ ನಗರ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಹಳೆನಗರ ಬಡಾವಣೆಯ ನಿತಿನ್ ಶೆಟ್ಟಿ (25), ಧರ್ಮ (30) ಬಂಧಿತ ಆರೋಪಿಗಳು. ವಿನೋಬನಗರ ಠಾಣಾ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಸ್ವಿಪ್ಟ್ ಕಾರಿನಲ್ಲಿ ಬಂದ ಇಬ್ಬರು, ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದನ್ನು ಗಮನಿಸಿ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಕಾರನ್ನು ಬೆನ್ನಟ್ಟಿ ತಪಾಸಣೆ ಮಾಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.
ಇತ್ತೀಚೆಗೆ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಆರೋಪ ಸಹ ಈ ಆರೋಪಿಗಳ ಮೇಲಿದೆ. ಆರೋಪಿಗಳಿಂದ 60 ಸಾವಿರ ನಗದು, ಮಾರುತಿ ಸ್ವಿಪ್ಟ್ ಕಾರು ಹಾಗೂ ಕಳ್ಳತನ ಮಾಡಿದ್ದ ಕಾರಿನ ಚಕ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos