ಕ್ಯಾನ್ಸರ್ ಗೆದ್ದ ಸೊನಾಲಿ ಬೇಂದ್ರೆ

ಕ್ಯಾನ್ಸರ್ ಗೆದ್ದ ಸೊನಾಲಿ ಬೇಂದ್ರೆ

ಮುಂಬೈ, ಏ. 13 : ಬಾಲಿವುಡ್ನ ತಾರಾ ನಟಿಯಾಗಿ ಮಿಂಚಿ ಸೊನಾಲಿ ಬೇಂದ್ರೆ ಕ್ಯಾನ್ಸರ್ಗೆ ತುತ್ತಾದರೂ ಅದನ್ನು ಗೆದ್ದ ಕೋವಿಡ್ 19 ಲಾಕ್ಡೌನ್ ವೇಳೆ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಕ್ಯಾನ್ಸರ್ ಗೆಲ್ಲುವ ಜತೆಗೆ ಮೊದಲಿನಿಂದಲೂ ತಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸ್ಮೂದಿ ಎಂದರೆ ಮಂದವಾದ ಜ್ಯೂಸ್ ಎಂದು ಅರ್ಥ. ಮನೆಯಲ್ಲೇ ತಯಾರಿಸಬಹುದಾದ, ಹಣ್ಣು, ಅರಿಷಿನ ಕೊಂಬು, ಶುಂಠಿ ಮತ್ತಿತರ ವಸ್ತುಗಳನ್ನು ಹಾಕಿದ ಸ್ಮೂದಿ ಇದಾಗಿದೆ.
ಇದನ್ನು ತಯಾರಿಸಲು ಒಂದು ಸೇಬು, ಒಂದು ಕ್ಯಾರಟ್, ಒಂದು ಬೆಟ್ಟದ ನೆಲ್ಲಿಕಾಯಿ, 2 ಇಂಚು ಹಸಿ ಅರಿಷಿನ ಕೊಂಬು, 2 ಇಂಚು ಹಸಿ ಶುಂಠಿ, 2 ಏಪ್ರಿಕಾಟ್, ಒಂದಷ್ಟು ಬಲ್ಯೂಬೆರಿ ಮತ್ತು ಕ್ರಾನ್ ಬೆರಿ, 7 ಬಾದಾಮಿ, ಒಂದಷ್ಟು ದಾಲ್ಚಿನ್ನಿ ಪುಡಿ, 2ರಿಂದ 4 ವಾಲ್ನಟ್, 2 ಬೀಜ ತೆಗೆದ ಖರ್ಜೂರ ಮತ್ತು ಒಂದು ಮುಷ್ಟಿಯಷ್ಟು ಪಾಲಕ್ ಸೊಪ್ಪು ಬೇಕಾಗುತ್ತದೆ.
ಇವೆಲ್ಲವನ್ನೂ ಮಿಕ್ಸಿ ಜಾರ್ಗೆ ಹಾಕಿ ರುಬ್ಬಿಕೊಂಡಾಗ ಸ್ಮೂದಿ ಸಿದ್ಧವಾಗುತ್ತದೆ. ಒಂದು ಗ್ಲಾಸ್ನಷ್ಟು ಸ್ಮೂದಿಯನ್ನು ಕುಡಿದರೆ ರೋಗನಿರೋಧ ಶಕ್ತಿ ಹೆಚ್ಚಾಗುತ್ತದೆ ಅಂತೆ. ನಾನು ಮೊದಲಿನಿಂದಲೂ ಈ ಸ್ಮೂದಿಯನ್ನು ಕುಡಿಯುತ್ತಿದ್ದೆ. ನಾನು ಕ್ಯಾನ್ಸರ್ಗೆ ತುತ್ತಾಗಿ, ಕೀಮೋಥೆರಪಿ ಮಾಡಿಸಿಕೊಳ್ಳುವಾಗ ಈ ಸ್ಮೂದಿಯ ಸೇವನೆಯಿಂದ ತುಂಬಾ ಅನುಕೂಲವಾಯಿತು ಎಂದು ಸೊನಾಲಿ ಬೇಂದ್ರೆ ಹೇಳಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos