ಕಂತೆ ಕಂತೆ ಹಣ ಮುಗಿಬಿದ್ದ ಜನ

ಕೋಲ್ಕತ್ತಾ, ನ. 21 : ಕೊಲ್ಕತ್ತಾದ ವಾಣಿಜ್ಯ ಕಟ್ಟಡದಿಂದ 2 ಸಾವಿರ, 500 ಮತ್ತು 100 ರೂ. ಮುಖಬೆಲೆಯ ನೋಟುಗಳನ್ನು ಜೇಬಿಗಿಳಿಸಿಕೊಂಡಿದ್ದಾರೆ. ಕಟ್ಟಡದ ಮೇಲಿಂದ ಕಂತೆ ಕಂತೆ ಹಣ ಎಸೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೋಲ್ಕತ್ತಾದ ನಂಬರ್ 27, ಬ್ಯಾಂಟಿಕ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ.
ಅಷ್ಟಕ್ಕೂ ಆಗಿದ್ದೇನು?…
ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಆಮದು ಮತ್ತು ರಫ್ತು ವ್ಯವಹಾರ ನಡೆಸುವ ಕಚೇರಿ (Hoque Merchantile Pvt Ltd) ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳು ಕಟ್ಟಡದ ಪರಿಶೀಲನೆಗೆ ಮುಂದಾದಾಗ ಅಲ್ಲಿಯವರು ತಮ್ಮಲ್ಲಿದ ಹಣವನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ.
ಕಟ್ಟಡದಿಂದ ಕಂತೆ ಕಂತೆ ಹಣ ಕೆಲವರು ಓಡೋಡಿ ಹೋಗಿ ಜೇಬಿಗೆ ಇಳಿಸಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಹೊರ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಪರಿಶೀಲನೆ ಮುಂದುವರಿದಿದ್ದು, ದಾಳಿಗೆ ಸಂಬಂಧಿಸಿದ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos