ಬುದ್ಧ ಮಲಗಿರುವ ಬೆಟ್ಟ

ಬುದ್ಧ ಮಲಗಿರುವ ಬೆಟ್ಟ

ಯಾದಗಿರಿ, ನ. 26 : ಒಮ್ಮೆ ನೋಡಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ನಿಸರ್ಗದತ್ತವಾದ ಬುದ್ಧ ಮಲಗಿಕೊಂಡಿರುವ ದೃಶ್ಯ ನೋಡುಗರ ಗಮನ ಸೆಳೆಯುತ್ತದೆ.
ವ್ಯಕ್ತಿಯೊಬ್ಬ ಬೆಟ್ಟದ ಮೇಲೆ ಮಲಗಿರುವಂತೆ ಸೃಷ್ಟಿಯಾಗಿರುವುದು ಪ್ರಕೃತಿ ವಿಚಿತ್ರತೆ. ಮುಖ, ಮೂಗು, ಹೊಟ್ಟೆ ಭಾಗಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಬುದ್ಧ ಮಲಗಿರುವ ದೃಶ್ಯ ಗುರುತಿಸಿರುವ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಆದರೆ ವಿದೇಶಿ ಅಧ್ಯಯನಕಾರರೊಬ್ಬರು ಪ್ರವಾಸದ ವೇಳೆ ಕಂಡುಬಂದಿರೋದನ್ನು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದರು ಎನ್ನಲಾಗುತ್ತಿದೆ.

ನಿಸರ್ಗದತ್ತವಾಗಿರುವ ಶಹಾಪುರದ ಬೆಟ್ಟದಲ್ಲಿ ಬುದ್ಧ ಮಲಗಿರುವಂತೆ ಕಾಣುವುದು ಸೃಷ್ಠಿಯ ವೈಶಿಷ್ಟ. ಹೈದ್ರಾಬಾದ್ ಕರ್ನಾಟಕದಲ್ಲಿ ಬುದ್ಧ ಮತ್ತು ಬೌದ್ಧ ಧರ್ಮದ ಬಗ್ಗೆ ಒಲವಿರುವುದರಿಂದ ಬೆಟ್ಟದಲ್ಲಿರುವ ವ್ಯಕ್ತಿಯ ದೃಶ್ಯದಲ್ಲಿ ಶಾಂತಿಧೂತ ಗೌತಮ ಬುದ್ಧನನ್ನು ಕಾಣುತ್ತಾರೆ.

ಶಹಾಪುರದ ಗಿರಿಯಲ್ಲಿ ವ್ಯಕ್ತಿ ಮಲಗಿರುವ ದೃಶ್ಯ ಕಂಡು ಬರುತ್ತದೆ. ಆದರೆ ಚಿತ್ರಣ ನೋಡಿದರೆ ನಿಮಗೆ ಓರ್ವ ವಿಶೇಷ ವ್ಯಕ್ತಿ ನಿಮ್ಮ ಕಣ್ಣಿಗೆ ಕಾಲ್ಪನಿಕವಾಗಿ ಕಾಣಬಹುದು. ಅದುವೇ ಬುದ್ಧ, ಅದುವೇ ಬುದ್ಧ ಮಲಗಿದ ದೃಶ್ಯ. ಆ ಈ ಬೆಟ್ಟವೇ ಬುದ್ಧ ಮಲಗಿದ ಬೆಟ್ಟ. ಭೂಮಿಗೆ ಸೋಕುತ್ತಿರುವ ನೇಸರನ ಕಿರಣಗಳು. ಸೂರ್ಯೋದಯ ಸುಂದರ ವೇಳೆಯಲ್ಲಿ ಬೆಟ್ಟದ ಮೇಲೆ ವ್ಯಕ್ತಿ ಮಲಗಿರುವ ದೃಶ್ಯ. ದಿಟ್ಟಿಸಿ ನೋಡಿದರೆ ಅಲ್ಲಿ ಬುದ್ಧ ಮಲಗಿದ್ದಾನೆಂಬ ಕಾಲ್ಪನಿಕ ಚಿತ್ರಣ. ಹೌದು ಪ್ರಕೃತಿಯ ಇಂತಹ ವೈಶಿಷ್ಟ್ಯತೆ ಯಾದಗಿರಿ ಜಿಲ್ಲೆಯ ಶಹಾಪುರ ಹೊರವಲಯದ ಬೆಟ್ಟದಲ್ಲಿ ಕಂಡು ಬರುತ್ತದೆ. ಶಹಾಪುರದಿಂದ ಕಲಬುರಗಿಗೆ ತೆರಳುವ ರಸ್ತೆಯ ಎಡಭಾಗದಲ್ಲಿ ಈ ವಿಶಿಷ್ಟ ಬೆಟ್ಟ ಕಾಣಸಿಗುತ್ತದೆ. ಗಿರಿಶಿಖರವನ್ನ ನೋಡಿದವರೆಲ್ಲ ಇಲ್ಲಿ ಗೌತಮ ಬುದ್ಧ ಮಲಗಿದ್ದಾನೆಂದು ಹೆಸರಿಡುತ್ತಾರೆ. ವಿಶಾಲವಾದ ಬೆಟ್ಟದ ಮೇಲೆ ಮೇಲ್ಮುಖವಾಗಿ ವ್ಯಕ್ತಿಯೊಬ್ಬರು ಮಲಗಿರುವ ದೃಶ್ಯ ಪ್ರಾಕೃತಿಕವಾಗಿ ರಚನೆಯಾಗಿದೆ…

ಫ್ರೆಶ್ ನ್ಯೂಸ್

Latest Posts

Featured Videos