ಬಿಗ್‌ ಬಾಸ್‌ ಮನೆಗೆ ಬ್ರಹ್ಮಾಂಡ ಗುರೂಜಿ ಎಂಟ್ರೀ!

ಬಿಗ್‌ ಬಾಸ್‌ ಮನೆಗೆ ಬ್ರಹ್ಮಾಂಡ ಗುರೂಜಿ ಎಂಟ್ರೀ!

ಬೆಂಗಳೂರು: ಕನ್ನಡದ ಅತ್ಯಂತ ದೊಡ್ಡ ಲಿಯಾಲಿಟಿ ಶೋ ಎಂದರೆ ಅದು ಬಿಗ್‌ ಬಾಸ್‌. ಇದಕ್ಕೆ ಆದಂತಹ ಅಭಿಮಾನಿಗಳು ಹೆಚ್ಚು.ಬಿಗ್‌ಬಾಸ್‌ ಕನ್ನಡ ಸೀಸನ್ 1 ಶೋನಲ್ಲಿ ಭಾಗವಹಿಸಿ ಮುಂಡಾ ಮುಚ್ತು ಅಂತ ಹೇಳಿ ಎಲ್ಲರನ್ನೂ ನಗಿಸಿದ್ದ, ಬ್ರಹ್ಮಾಂಡ ಗುರೂಜಿ  ನರೇಂದ್ರ ಶರ್ಮ, ಇದೀಗ ಬಿಗ್‌ಬಾಸ್‌ ಸೀಸನ್‌ 10  ಮನೆಗೆ ಆಗಮಿಸಿದ್ದಾರೆ. ಪ್ರತಿ ವಾರ ಬಿಗ್‌ಬಾಸ್‌ ಮನೆಗೆ ಒಬ್ಬರಲ್ಲ ಒಬ್ಬರು ಅತಿಥಿಗಳು ಬಂದು ಹೋಗುತ್ತಿದ್ದು, ಈ ವಾರ ಬ್ರಹ್ಮಾಂಡ ಗುರೂಜಿ, ದೊಡ್ಮನೆಗೆ ಎಂಟ್ರೀ ನೀಡಿ ಆಟದ ಮಧ್ಯೆ ‘ತುಕಾಲಿ ಸ್ಟಾರ್’ ಸಂತು, ನೀತು, ಕಾರ್ತಿಕ್‌ಗೆ ಭವಿಷ್ಯವನ್ನು ಹೇಳಿದ್ದಾರೆ.

ತುಕಾಲಿ ಸಂತು ಕುಂಭ ರಾಶಿ ನಂದು, ಅದಿಕ್ಕೆ ನೀಲಿ ಬಣ್ಣದ ಉಂಗುರ ಹಾಕಿಕೊಂಡೆ  ಎಂದು ಬ್ರಹ್ಮಾಂಡ ಗುರೂಜಿಗೆ ಹೇಳಿದಾಗ, “ಕುಂಭ ರಾಶಿಗೆ ನೀಲಿ ಹಾಕ್ಕೊಳದಲ್ಲ, ಇರಲಿ ಬಿಡು” ಅಂತ ಬ್ರಹ್ಮಾಂಡ ಗುರೂಜಿ ಸಂತುಗೆ ಹೇಳಿದ್ದಾರೆ. ಇನ್ನು ಕಪ್ಪು ಬಣ್ಣದ ಬಟ್ಟೆ ಹಾಕಿಕೊಂಡಿದ್ದ ಕಾರ್ತಿಕ್ ನೋಡಿ ಗುರೂಜಿ  “ನೋಡು ಅವನು ಬ್ಲ್ಯಾಕ್. ನೀಲಿ ಅಂದ್ರೆ ಶನಿ. ಬ್ಲ್ಯಾಕ್ ಅಂದ್ರೂ ಶನಿ” ಎಂದು ಹೇಳಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos