ಬ್ಲಾಕ್ ಮೇಲ್ ರಾಜಕಾರಣಕ್ಕೆ ಹೆದರುವುದಿಲ್ಲ

ಬ್ಲಾಕ್ ಮೇಲ್ ರಾಜಕಾರಣಕ್ಕೆ ಹೆದರುವುದಿಲ್ಲ

ಮಾಲೂರು:ಬ್ಲಾಕ್ ಮೇಲ್ ರಾಜಕಾರಣಕ್ಕೆ ಹೆದರುವದಿಲ್ಲ. ಅಧಿಕಾರಿಗಳೇ ಶಿಸ್ತು, ಸಂಯಮ ಮತ್ತು ಸಮಯ ಪಾಲಿಸದಿದ್ದರೆ. ತಾಲೂಕಿನ ಅಭಿವೃದ್ದಿ ಹೇಗೆ ಸಾಧ್ಯ ಎಂದು ಶಾಸಕ ಕೆ.ವೈ.ನಂಜೇಗೌಡ ಅಧಿಕಾರಿಗಳ ವಿರುದ್ದ ಗರಂ.

ಪಟ್ಟಣದ ತಾ.ಪಂ. ಸಾಮರ್ಥ್ಯಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು .

ತಾಲೂಕಿನ ಸರ್ವತೋಮುಖ ಅಭಿವೃದ್ದಿ ವಿಚಾರವಾಗಿ ಶಾಕರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯು ೧೧  ಗಂಟೆಗೆ ನಿಗದಿಪಡಿಸಿದ್ದು, ಸಭೆಗೆ ಶಾಸಕರು ಬಂದಾಗ ಬೆರಳೆಣಿಕೆಯಷ್ಟು ಅಧಿಕಾರಿಗಳು ಹಾಜರಾಗಿದ್ದನ್ನು ಕಂಡು ಸಭಾಂಗಣದಿಂದ ಅಧಿಕಾರಿಗಳ ನರ‍್ಲಕ್ಷ್ಯತೆ, ಸಮಯ ಪ್ರಜ್ಞೆಯನ್ನು ಕಂಡು ಹೊರಬಂದು ತಾಪಂ ಕಾರ್ಯನಿರ್ವಹಣಾ ಅಧಿಕಾರಿಗೆ ೩೦ ನಿಮಿಷ ಕಾಲಾವಕಾಶ ನೀಡಿ ಎಲ್ಲಾ ಅಧಿಕಾರಿಗಳು ಹಾಜರಾಗುವಂತೆ ಸೂಚಿಸಿ ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.

ನಂತರ ಅರ್ಧ ಗಂಟೆಯ ಸಮಯದಲ್ಲಿ ಸಭೆ ಆರಂಭವಾಗಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿ. ಅಧಿಕಾರಿಗಳಿಗೆ ಒಂದು ವಾರದ ಮುಂಚೆಯೇ   ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ನೋಟಿಸ್ ನೀಡಿದ್ದರೂ  ಸಹ ಸಭೆಗೆ  ಅನೇಕ ಅಧಿಕಾರಿಗಳು ಒಂದು ಗಂಟೆ ತಡವಾಗಿ ಬಂದಿರುವುದು ಅವರಿಗೆ ಶಿಸ್ತು ಮತ್ತು ಸಮಯ ಪ್ರಜ್ಞೆ, ಸೌಜನ್ಯತೆಯಿಲ್ಲ. ಒಬ್ಬ ಶಾಸಕ  ಅಧಿಕಾರಿಗಳಿಗೆ ಮುನ್ನ ಸಭೆಗೆ ಬಂದು ಅಧಿಕಾರಿಗಳಿಗೆ ಕಾಯುವುದು ಎಷ್ಟರಮಟ್ಟಿಗೆ ಸರಿ ಎಂಬುದು ನೀವೇ ಯೋಚನೆ ಮಾಡಿ, ನಾನು ಶಾಸಕನಾಗಿ ಎರಡು ವರ್ಷಗಳಿಂದ ಯಾವುದೇ ಅಧಿಕಾರಿಯ ಬಳಿ ನೂರು ರೂಪಾಯಿ ಪಡೆದ  ಹಂಗಿಲ್ಲ, ನಾನು ಸೌಜನ್ಯ ರೀತಿಯಿಂದ ನಡೆದುಕೊಂಡು ಬಂದಿದ್ದೇನೆ. ಗೌರವಯುತವಾಗಿ ನಾನು ಜನಗಳ ಸೇವೆ ಮಾಡಬೇಕೆಂದು ಶಾಸಕನಾಗಿದ್ದೇನೆ. ಹೊರತು ಹಣ ಸಂಪಾದನೆ ಮಾಡುವುದಕ್ಕಲ್ಲ. ಅಧಿಕಾರಿಗಳು ತಾಲೂಕಿನ ಸರ್ವತೋಮುಖ ಅಭಿವೃದ್ದಿಗೆ ಸ್ಥಳೀಯ ಶಾಸಕರಿಗೆ ಸಹಕಾರ ನೀಡಬೇಕು. ಇಂತಹ ಘಟನೆಗಳು  ಇನ್ನು ಮುಂದೆ ಈ ರೀತಿ   ಆಗದಂತೆ  ಎಚ್ಚರಿಕೆ ವಹಿಸಿ  ಅಧಿಕಾರಿಗಳು ಸಭೆಗೆ ಬರುವಾಗ  ಸಂಬಂಧ ಪಟ್ಟ ಇಲಾಖೆಯ ಮಾಹಿತಿ ದಾಖಲೆಗಳನ್ನು   ತಂದು  ಸಕಾಲಕ್ಕೆ ಹಾಜರಾಗಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಗ್ರಾಮೀಣ ಭಾಗದ  ಜನರಿಗೆ  ಕುಡಿಯುವ, ನೀರು, ವಿದ್ಯುತ್, ಚರಂಡಿ  ಸೇರಿದಂತೆ ಮೂಲಭೂತ ಸೌಕರ್ಯಗಳಿಗೆ  ಮೊದಲನೇ ಆದ್ಯತೆ ನೀಡಬೇಕು. ಮಾಸ್ತಿಯಲ್ಲಿ   ಕೆಲವು ಮುಖಂಡರುಗಳು  ಕಡಿಮೆ ಬೆಲೆಗೆ  ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಅಂಗಡಿ ಬಾಡಿಗೆಗೆ    ಪಡೆದು. ಸಾವಿರಾರು ರೂಗಳಿಗೆ  ಬೇರೆಯವರಿಗೆ ಬಾಡಿಗೆಗೆ ಕೊಟ್ಟಿದ್ದಾರೆ. ಡಿ ಎನ್ ದೊಡ್ಡಿಯಲ್ಲಿ  ಅಕ್ರಮವಾಗಿ ೫೦ ಅಂಗಡಿಗಳು  ನಿರ್ಮಾಣ ಮಾಡಿ.  ಎರಡು ಸಾವಿರ, ಮೂರು ಸಾವಿರ ರೂಗಳಿಗೆ  ಅಂಗಡಿಗಳನ್ನು ಬಾಡಿಗೆಗೆ ನೀಡಿ  ಅಂಗಡಿ ಮಾಲೀಕರು  ತಮಿಳುನಾಡಿನಲ್ಲಿ ವಾಸ ಮಾಡುತ್ತಿದ್ದಾರೆ .  ತಾಲ್ಲೂಕು ಆಡಳಿತವು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ  ಸಭೆಯಲ್ಲಿ ತೀರ್ಮಾನಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos